BELTHANGADI
ಬೆಳ್ತಂಗಡಿ: ನೇತ್ರಾವತಿ ಸ್ನಾನಘಟ್ಟಕ್ಕೆ ಇಳಿದ ಯುವತಿ ನಾಪತ್ತೆ
ಬೆಳ್ತಂಗಡಿ, ಜುಲೈ 15: ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟಕ್ಕೆ ಇಳಿದ ಯುವತಿಯೊಬ್ಬಳು ನಾಪತ್ತೆಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಇಂದು ಬೆಳಗ್ಗೆ 6 ಗಂಟೆಗೆ ಧರ್ಮಸ್ಥಳ ಕ್ಷೇತ್ರ ದರ್ಶನಕ್ಕೆ ಬಂದು ತದನಂತರ ಆಟೋದಲ್ಲಿ ಬಂದು ಸ್ನಾನ ಮಾಡಲು ಸ್ನಾನಘಟ್ಟದ ಮೆಟ್ಟಲಿನಲ್ಲಿ ಚಪ್ಪಲಿ ಇಟ್ಟು ನೀರಿಗೆ ಇಳಿದ್ದಿದ್ದು, ನಾಪತ್ತೆಯಾಗಿದ್ದಾಳೆ. ಸದ್ಯ ಯುವತಿಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
ಯುವತಿ ಎಲ್ಲಿಂದ ಬಂದಿದ್ದಾಳೆ, ಒಬ್ಬಳೇ ಬಂದಿದ್ದಾಳೆಯೇ ಇನ್ನಿತರ ಮಾಹಿತಿ ಸಿಕ್ಕಿಲ್ಲ. ಸ್ಥಳದಲ್ಲಿ ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ದಳ ಶೋಧ ನಡೆಸುತ್ತಿದ್ದಾರೆ. ದಕ್ಷಿಣ ಕನ್ನಡ ಹಾಗೂ ಘಟ್ಟಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ನದಿಯು ತುಂಬಿ ಹರಿಯುತ್ತಿದೆ.
You must be logged in to post a comment Login