ಚೆನ್ನೈ ಸೆಪ್ಟೆಂಬರ್ 18: ತಮಿಳು ಚಿತ್ರರಂಗದ ಖ್ಯಾತ ನಟ ರೋಬೋ ಶಂಕರ್ ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು.


ಇತ್ತೀಚೆಗೆ ಸಿನೆಮಾ ಚಿತ್ರೀಕರಣದ ವೇಳೆ ಅನಾರೋಗ್ಯಕ್ಕೀಡಾಗಿದ್ದ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಪರಿಸ್ಥಿತಿ ಹದಗೆಟ್ಟ ಕಾರಣ ಅವರನ್ನು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ರಾತ್ರಿ 8.30 ರ ಸುಮಾರಿಗೆ ನಿಧನರಾದರು. ರೋಬೋ ಶಂಕರ್ ದೂರದರ್ಶನ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ. ವಿಜಯ್ ಟಿವಿಯಲ್ಲಿ ಪ್ರಸಾರವಾಗುವ ವಿವಿಧ ಕಾರ್ಯಕ್ರಮಗಳಲ್ಲಿ ರೋಬೋ ಶಂಕರ್ ತಮ್ಮ ಮಿಮಿಕ್ರಿ ಮೂಲಕ ಜನರನ್ನು ಮೆಚ್ಚಿಸಿದ್ದಾರೆ.

ಧರ್ಮ ಚಕ್ರಂ, ಮಾರಿ, ಇರುತುತಾನ ಆಸೆಪಟ್ಟೈ, ದೇಸಿಂಗುರಾಜ, ಪುಲಿ, ವಿಶ್ವಾಸಂ, ಇರುಂಬುತಿರೈ ಸೇರಿದಂತೆ ಹಲವು ಚಿತ್ರಗಳಲ್ಲಿ ರೋಬೋ ಶಂಕರ್ ನಟಿಸಿದ್ದಾರೆ. ಮಧುರೈನ ಶಂಕರ್, ವೇದಿಕೆ ಕಾರ್ಯಕ್ರಮಗಳಲ್ಲಿ ರೋಬೋಟ್ ಆಗಿ ನೃತ್ಯ ಮಾಡುವ ಮೂಲಕ ಪ್ರಸಿದ್ಧರಾದರು. ಅದಕ್ಕಾಗಿಯೇ ಅವರನ್ನು ರೋಬೋ ಶಂಕರ್ ಎಂದು ಕರೆಯಲಾಯಿತು. ನಂತರ, ಅವರು ಖಾಸಗಿ ಟಿವಿ ಹಾಸ್ಯ ಕಾರ್ಯಕ್ರಮಗಳ ಮೂಲಕ ಪ್ರಸಿದ್ಧರಾದರು.

Share Information