Connect with us

LATEST NEWS

ಹೆಜ್ಜೇನು ದಾಳಿ ಆರು ಮಹಿಳೆಯರಿಗೆ ಗಂಭೀರ ಗಾಯ

ಕೋಟ ಡಿಸೆಂಬರ್ 19: ಕೃಷಿ ಕಾರ್ಯದಲ್ಲಿ ತೊಡಗಿದ್ದ 6 ಮಂದಿ ಮಹಿಳೆಯರ ಮೇಲೆ ಹೆಜ್ಜೇನು ದಾಳಿ ನಡೆಸಿರುವ ಘಟನೆ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಕಾಸನಗುಂದು ಪರಿಸರದಲ್ಲಿ ನಿನ್ನೆ ನಡೆದಿದೆ.


ನಿನ್ನೆ ಸಂಜೆ ಕೃಷಿ ಕಾರ್ಯದ ನಿಮಿತ್ತ ಗದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಏಕಾಏಕಿ ಹೆಜ್ಜೇನುಗಳು ಈ ಮಹಿಳೆಯರ ಮೇಲೆ ದಾಳಿ ಮಾಡಿದ್ದು ಐವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಅವರಲ್ಲಿ ಪ್ರೇಮ ಹಾಗೂ ಬುಡ್ಡು ಎನ್ನುವಾಕೆಗೆ ಹೆಜ್ಜೇನು ಅತೀಯಾಗಿ ಕಚ್ಚಿದ ಪರಿಣಾಮ ಮಣಿಪಾಲದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇವರಲ್ಲಿ ಕಾವೇರಿ,ಪದ್ದು,ಸುಶೀಲ ಮೂವರು ಕೋಟೇಶ್ಚರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಒರ್ವಾಕೆ ಲಚ್ಚಿ ಕೋಟದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Facebook Comments

comments