BANTWAL
ಬಂಟ್ವಾಳ – ಆಟೋ ಚಾಲಕನ ಮೇಲೆ ತಲ್ವಾರ್ ದಾಳಿ
ಬಂಟ್ವಾಳ ನವೆಂಬರ್ 14: ಆಟೋ ಚಾಲಕನೊಬ್ಬನ ಮೇಲೆ ದುಷ್ಕರ್ಮಿಗಳ ತಂಡವೊಂದು ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಬಂಟ್ವಾಳ ತಾಲೂಕಿನ ಬೋಳಂತೂರು ಸಮೀಪದ ನಾಡಾಜೆಯಲ್ಲಿ ನಡೆದಿದೆ.
ಬೋಳಂತೂರು ಸಮೀಪದ ಗುಳಿ ನಿವಾಸಿ ಶಾಕೀರ್ (30) ಹಲ್ಲೆಗೊಳಗಾದ ಆಟೋ ಚಾಲಕ. ಶಾಕೀರ್ ಕಬಡ್ಡಿ ಮ್ಯಾಚ್ ಮುಗಿಸಿಕೊಂಡು ಮನೆಗೆ ಆಟೋದಲ್ಲಿ ಹಿಂತಿರುಗುತ್ತಿದ್ದ. ಈ ವೇಳೆ ಬೋಳಂತೂರು ಸಮೀಪದ ನಾಡಾಜೆ ರಸ್ತೆಯಲ್ಲಿ ಆಟೋವನ್ನು ತಡೆದು ನಿಲ್ಲಿಸಿ ನಾಲ್ವರ ತಂಡ ತಲವಾರಿನಿಂದ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದೆ.
ಹಲ್ಲೆಗೊಳಗಾದ ಶಾಕೀರ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಪರಿಚಯಸ್ಥರೇ ಕೃತ್ಯ ಎಸಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login