Connect with us

    BANTWAL

    ಬಂಟ್ವಾಳ – ನೇತ್ರಾವತಿ ನದಿಯಲ್ಲಿ ಈಜಲು ಹೋಗಿ ಬಾಲಕ ಸಾವು…!!

    ಬಂಟ್ವಾಳ ನವೆಂಬರ್ 11: ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಬಿ.ಸಿ.ರೋಡ್ ಸಮೀಪದ ಬ್ರಹ್ಮರಕೂಟ್ಲು ಎಂಬಲ್ಲಿ ನಡೆದಿದೆ.


    ಮೃತ ಬಾಲಕನನ್ನು ಬಿ.ಸಿ.ರೋಡ್ ಕೈಕಂಬ ಪರ್ಲ್ಯ ಮದ್ದ ನಿವಾಸಿ ಜುನೈದ್ ಎಂಬವರ ಪುತ್ರ ಸಲ್ಮಾನ್ (15) ಎಂದು ಗುರುತಿಸಲಾಗಿದೆ. ಈತ ಬಿ.ಸಿ.ರೋಡ್ ಕೈಕಂಬದ ಬೆಸ್ಟ್‌ ಆಂಗ್ಲ ಮಾಧ್ಯಮ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿಯಾಗಿದ್ದಾನೆ. ಇಂದು ಶಾಲೆಗೆ ರಜೆ ಇದ್ದ ಕಾರಣ ನಾಲ್ಕು ಮಂದಿ ಗೆಳೆಯರು ಸಂಜೆಯ ವೇಳೆಗೆ ಬ್ರಹ್ಮರಕೂಟ್ಲು ಬಂಟರ ಭವನದ ಬಳಿ ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದರು. ಈಜುತ್ತಿದ್ದ ವೇಳೆ ಸಲ್ಮಾನ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply