Connect with us

    KARNATAKA

    24,000 ಕಿ.ಮೀ ಸೈಕಲ್ ಜಾಥಾ ನಡೆಸಿ ಗಿನ್ನಿಸ್ ವಲ್ಡ್ ರೆಕಾರ್ಡ್ ಮಾಡಿದ ಬೆಂಗಳೂರಿನ ಯುವಕರು

    ಬೆಂಗಳೂರು, ಸೆಪ್ಟೆಂಬರ್ 13: ದೇಶ ಸುತ್ತು ಕೋಶ ಓದು ಎನ್ನುವ ಮಾತಿದೆ. ಬೆಂಗಳೂರಿನ ಈ ಯುವಕರು ಶಿಕ್ಷಣ ಮತ್ತು ಪರಿಸರ ಜಾಗೃತಿಗಾಗಿ 24,000 ಕಿ ಮೀ ಸೈಕಲ್ ಜಾಥಾ ನಡೆಸಿ ಗಿನ್ನಿಸ್ ವಲ್ಡ್ ರೆಕಾರ್ಡ್ ಸೇರಿದ್ದಾರೆ.

    ಬೆಂಗಳೂರಿನ ಧನುಷ್ ಮಂಜುನಾಥ್ ಮತ್ತು ಹೇಮಂತ್  ಈ ಸಾಧನೆ ಮಾಡಿದ ಯುವಕರು. ಮಧ್ಯಮ  ವರ್ಗದ ಯುವಕರಾದ ಇವರು  ಏನಾದರು ಸಾಧನೆ ಮಾಡಬೇಕು, ಸಮಾಜಕ್ಕೆ ಏನಾದರು ಸಂದೇಶ ನೀಡಬೇಕು ಎನ್ನುವ ಉದ್ದೇಶದಿಂದ 15,000 ಕಿ ಮೀ ಸೈಕಲ್ ಜಾಥಾ ಆರಂಭಿಸುವ ಯೋಜನೆಗೆ ಬರುತ್ತಾರೆ. ಈ ಸಂದರ್ಭ 19,4೦೦ ಕಿ ಮೀ ಸೈಕಲ್ ಜಾಥಾ ನಡೆಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿರುವ ಮಾಹಿತಿ ತಿಳಿದ ಯುವಕರು ಹೊಸ ದಾಖಲೆ ಬರೆಯಲು ಮುಂದಾಗುತ್ತಾರೆ. ವಿಶೇಷ ಅಂದರೆ ಈ ಯುವಕರು ಸೈಕ್ಲಿಂಗ್ ನಲ್ಲಿ ಪರಿಣಿತಿ ಪಡೆದವರಲ್ಲ.

    ಜುಲೈ 11 2021 ರಂದು ಬೆಂಗಳೂರಿನಿಂದ ಶಿಕ್ಷಣ ಮತ್ತು ಪರಿಸರ ಜಾಗೃತಿಗಾಗಿ ಆರಂಭಗೊಂಡ ಸೈಕಲ್ ಜಾಥಾ ಆಂಧ್ರಪ್ರದೇಶ, ತೆಲಂಗಾಣ , ಗುಜರಾತ್ ,ಮಧ್ಯಪ್ರದೇಶ , ಉತ್ತರಾಖಂಡ್ , ಹಿಮಾಚಲಪ್ರದೇಶ, ಬಿಹಾರ, , ಪಶ್ಚಿಮ ಬಂಗಾಲ , ಉತ್ತರಪ್ರದೇಶ, ಹರಿಯಾಣ, ಒರಿಸ್ಸಾ, ಝಾರ್ಖಂಡ್, ರಾಜಸ್ಥಾನ, ಮಣಿಪುರ, ನಾಗಾಲ್ಯಾಂಡ್, ದೆಹಲಿ, ಪಂಜಾಬ್, ಮಹಾರಾಷ್ಟ್ರ, ಗೋವಾ, ತಮಿಳುನಾಡು ರಾಜ್ಯ ಗಳಿಗೆ ಭೇಟಿ ನೀಡಿ ಮಾರ್ಚ್ 12  2022 ಕ್ಕೆ ಸುದೀರ್ಘ 8 ತಿಂಗಳ 24೦೦೦ ಕಿ.ಮೀ ಪ್ರಯಾಣ ಮುಗಿಸಿದ್ದಾರೆ.

    ಈ ಸಂದರ್ಭದಲ್ಲಿ 4  ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದಾರೆ. ಉತ್ತರಾಖಂಡ್ , ಮಧ್ಯಪ್ರದೇಶ, ಗುಜರಾತ್ , ಗೋವಾ ದ ಮುಖ್ಯಮಂತ್ರಿಗಳು ಹಾಗು ಹಿಮಾಚಲ ಪ್ರದೇಶದ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. ಈ ಜಾಥಾ ದಲ್ಲಿ ಭೇಟಿನೀಡಿದ ಪ್ರದೇಶದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಮಾಡಿದ್ದಾರೆ.

    ಈ ಬಗ್ಗೆ ಮಾತನಾಡಿದ ಧನುಷ್ ಮಂಜುನಾಥ್ “ನಾವು 2-5 ಕಿಲೋಮೀಟರ್ ದೂರವನ್ನು ಸೈಕಲ್ ನ ಉಪಯೋಗ ಮಾಡುವುದರಿಂದ ವಾಯು ಮಾಲಿನ್ಯವನ್ನು ಹಾಗೂ ಪರಿಸರ ಮಾಲಿನ್ಯವನ್ನು ತಡೆಯಬಹುದು ಹಾಗೂ ಆರೋಗ್ಯವನ್ನು ಕಾಪಾಡಬಹುದು” ಎಂದಿದ್ದಾರೆ.

    ಪ್ರತಿದಿನ ಬೆಳಗ್ಗೆ 6.30  ರಿಂದ ಸಂಜೆ 6.30 ರ ತನಕ ಸೈಕ್ಲಿಂಗ್ ಮಾಡುತ್ತಿದ್ದೆವು, 1 ದಿನಕ್ಕೆ 100-120 ಕಿ.ಮೀ ದೂರ ಕ್ರಮಿಸುತಿದ್ದೆವು. ನಾವು ಹೋದಲೆಲ್ಲಾ ರೋಟರಿ ಕ್ಲಬ್  ನಮಗೆ ತುಂಬಾ ಸಹಕಾರ ನೀಡಿದೆ. ಈ ಜಾಥಾಗೆ ಪ್ರಶಾಂತ್ ರೆಡ್ಡಿ,  ಹರಿಪ್ರಸಾದ್ ರೆಡ್ಡಿ, ಡಾ.ದುರ್ಗಾಪ್ರಸಾದ್ ರೆಡ್ಡಿ, ರೋಟರಿ ಕ್ಲಬ್  ಬೆಂಗಳೂರು ವಿಟೆಫಿಲ್ಡ್  ಸೆಂಟ್ರಲ್ , ಶಿಶುಮಂದಿರ , ಪೋಲಿಗನ್ ಬೈಕ್ಸ್, ಭಾರತೀಯ ಜನತಾ ಯುವ ಮೋರ್ಚಾ , ಸಂಸದರು ತೇಜಸ್ವಿಸೂರ್ಯ ಹಾಗು ದೇಶದ ಜನತೆ ತುಂಬಾ ಬೆಂಬಲ ನೀಡಿದ್ದಾರೆ ಎಂದರು.

    ಈ ಜಾಥಾ ಗೆ 8-9 ಲಕ್ಷ ವೆಚ್ಚವಾಗಿದೆ. ಈ ಯುವಕರು  ಅಂತಾರಾಷ್ಟ್ರೀಯ ಜಾಥಾವನ್ನು ಸೈಕಲ್ ನಲ್ಲಿ ಮಾಡಬೇಕು ಎನ್ನುವ ಯೋಜನೆಯನ್ನು ಹೊಂದಿದ್ದಾರೆ .

    ಗಿನ್ನಿಸ್ ವಲ್ಡ್ ರೆಕಾರ್ಡ್ ಹೇಗೆ ?

    ಈ ದಾಖಲೆಗೆ ಜಾಥಾ ದ 3 ತಿಂಗಳ ಮೊದಲು ಅರ್ಜಿ ಸಲ್ಲಿಸ ಬೇಕಾಗಿತ್ತು.  ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯಿಂದ ಒಪ್ಪಿಗೆ ದೊರೆತ ನಂತರ ಈ ಜಾಥಾ  ಆರಂಭಿಸಿದ್ದಾರೆ. ಜಾಥಾ ದ ಸಂದರ್ಭದಲ್ಲಿ ಪ್ರತಿ ದಿನ 4 ಜನರ ದಾಖಲೆ ಪತ್ರ, 2 ಸರಕಾರಿ ಉದ್ಯೋಗಿಗಳ ಸಾಕ್ಷಿ ಹಾಗು ಪ್ರತಿ ಗಂಟೆಗೆ ವಿಡಿಯೋ ಮಾಡಬೇಕಾಗುತ್ತದೆ.

    Share Information
    Advertisement
    Click to comment

    You must be logged in to post a comment Login

    Leave a Reply