ಚುನಾವಣಾ ಆಯೋಗದ #ModaluVotingAmaleOuting ಬ್ರೇಕ್ ಹಾಕಿದ ಖಾಸಗಿ ಬಸ್ ದರ ಏರಿಕೆ

ಉಡುಪಿ ಮಾರ್ಚ್ 12: ದೇಶದ ಬಹುದೊಡ್ಡ ಪ್ರಜಾತಂತ್ರದ ಹಬ್ಬ ಲೋಕಸಭಾ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು, ಚುನಾವಣಾ ಆಯೋಗ ಈಗಾಗಲೇ ಮತದಾನದ ಶೇಕಡವಾರು ಹೆಚ್ಚಳಕ್ಕೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು. ಆದರೆ ಕರಾವಳಿ ಜಿಲ್ಲೆಗಳಲ್ಲಿ ಮತದಾನದ ಹೆಚ್ಚಳಕ್ಕೆ ಈ ಬಾರಿ ಖಾಸಗಿ ಬಸ್ ನ ದರ ಏರಿಕೆ ಬ್ರೇಕ್ ಹಾಕಲಿದೆ ಎಂದು ಹೇಳಲಾಗಿದ್ದು, ಈಗಾಗಲೇ ಈ ಕುರಿತಂತೆ ಆಕ್ರೋಶ ವ್ಯಕ್ತವಾಗಿದೆ.

ಚುನಾವಣಾ ಆಯೋಗ ಈಗಾಗಲೇ ಕರ್ನಾಟಕದಲ್ಲಿ ನಡೆಯುವ ಎಪ್ರಿಲ್ 18 ಮತ್ತು 23 ರ ಮತದಾನಕ್ಕೆ ಅತಿ ಹೆಚ್ಚು ಸಂಖ್ಯೆಯಲ್ಲಿ ಬಾಗವಹಿಸಿ ಎಂದು ಪ್ರಚಾರ ಕಾರ್ಯ ಮಾಡುತ್ತಿದ್ದು, ಜನರಲ್ಲಿ ಈ ಕುರಿತಂತೆ ಅರಿವು ಮೂಡಿಸುವ ಕೆಲಸಗಳನ್ನು ಮಾಡುತ್ತಿದೆ. ಸೋಶಿಯಲ್ ಮಿಡಿಯಾದಲ್ಲಿ ಕೂಡ ” ವೋಟ್ಗೆ ವೋಟ್ , ಕೆಲಸಕ್ಕೆ ಕೆಲಸ, ರಜಕ್ಕೆ ರಜಾ ,ಮಜಕ್ಕೆ ಮಜಾ, ದೇಶ ಮೊದಲು ಆಮೇಲೆ ನೀನು.. what say brothers & sisters ? ಎಂದು ಟ್ವೀಟರ್ ನಲ್ಲಿ ಮತದಾನ ಮಾಡಲು ಈಗಾಗಲೇ ಯುವಜನತೆಯನ್ನು ಪ್ರೇರಿಪಿಸುತ್ತದೆ.

ಆದರೆ ಕರಾವಳಿ ಜಿಲ್ಲೆಗಳಲ್ಲಿ ಬಹುತೇಕ ಯುವಜನತೆ ತಮ್ಮ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಮತದಾನ ಮಾಡಲು ಊರಿಗೆ ಮರಳಬೇಕಾದ ಅನಿವಾರ್ಯತೆ ಇದೆ. ಆದರೆ ಚುನಾವಣಾ ಆಯೋಗದ ಆಶಯಕ್ಕೆ ಖಾಸಗಿ ಬಸ್ ಮಾಲಕರು ಈ ಬಾರಿ ಬಸ್ ದರ ಏರಿಸುವ ಮೂಲಕ ಮತದಾರರು ಮತದಾನಕ್ಕೆ ಬರಲು ಯೋಚನೆ ಮಾಡುವ ಹಾಗೆ ಮಾಡಿದ್ದಾರೆ. ಖಾಸಗಿ ಬಸ್ ಮಾಲಕರ ಈ ರೀತಿಯ ದರ ಏರಿಕೆಗೆ ಈಗ ಕಡಿವಾಣ ಹಾಕೋರು ಯಾರು ಎನ್ನುವ ಪ್ರಶ್ನೆ ಎದ್ದಿದೆ.

ಚುನಾವಣೆ ಘೋಷಣೆಯಾದ ಬೆನ್ನಲ್ಲೆ ಏಪ್ರಿಲ್ 18ಕ್ಕೆ ಕರಾವಳಿ ಜಿಲ್ಲೆ ಮಂಗಳೂರು, ಉಡುಪಿ ಕಡೆ ಬೆಂಗಳೂರಿಂದ ಹೊರಡುವ ಬಸ್ಸುಗಳ ಬೆಲೆ ಗಗನಕ್ಕೇರಿದೆ. ಬೆಂಗಳೂರಿನಿಂದ ಕುಂದಾಪುರ, ಉಡುಪಿ ಭಾಗಕ್ಕೆ ಬರುವ ಖಾಸಗಿ ಬಸ್ಸುಗಳು ಚುನಾವಣೆಗೆ ಒಂದು ತಿಂಗಳು ಮುನ್ನವೇ ಬಸ್ ಟಿಕೆಟ್ ದರವನ್ನು ಸುಮಾರು ಒಂದೂವರೆ ಸಾವಿರ ರೂ.ಗೆ ಏರಿಸಿದ್ದಾರೆ.

ಸದ್ಯ 400, 450, 500 ರೂ. ಇರುವ ಟಿಕೆಟ್ ದರ ಚುನಾವಣೆ ದಿನ 1400, 1500, 1600 ಆಗಿದೆ. ಆಪ್ ನಲ್ಲಿ ಮುಂಗಡ ಬುಕ್ಕಿಂಗ್ ಬುಕ್ ಮಾಡಿ ಬಂದ್ರೆ ಬಳಿಕ ಚುನಾವಣೆ ಮುಗಿಸಿ ವಾಪಾಸ್ ಹೋಗುವ ದಿನದ ಟಿಕೆಟ್ ದರ 2,000 ರೂ. ಆದರೂ ಅಚ್ಚರಿಯಿಲ್ಲ ಎನ್ನಲಾಗಿದೆ.

ಚುನಾವಣೆಯಲ್ಲಿ ಮತದಾನ ಮಾಡಲು ಟಿಕೆಟ್ ಬುಕ್ ಮಾಡಲು ಹೊರಟ ಬ್ರಹ್ಮಾವರದ ಶರತ್ ಎಂಬವರಿಗೆ ಬಸ್ ದರದ ಶಾಕ್ ಆಗಿದೆ. ವೋಟ್ ಹಾಕುವ ಮನಸ್ಸಾಗಿತ್ತು. ಆದ್ರೆ ಈಗ ವೋಟು ಬೇಡ ಏನೂ ಬೇಡ. 1,600 ಕೊಟ್ಟು ವೋಟು ಹಾಕುವ ಅವಶ್ಯಕತೆ ಏನೂ ಇಲ್ಲ ಎಂದು ಗರಂ ಆಗಿದ್ದಾರೆ. ಹಬ್ಬ ಹರಿದಿನಕ್ಕೆ ಊರಿಗೆ ಬರುವಾಗಲೂ ಬಸ್ಸಿನವರದ್ದು ಇದೇ ರೀತಿ ಇತ್ತು. ಈಗ ಚುನಾವಣೆ ದಿನಕ್ಕೂ ರೇಟ್ ಏರಿಸ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

0 Shares

Facebook Comments

comments