Connect with us

    KARNATAKA

    ಇನ್ಸ್ಟಾಗ್ರಾಂ ಪೋಸ್ಟ್ – ಬೆಂಗಳೂರು ವಿಧ್ಯಾರ್ಥಿನಿಯರ ಬೀದಿ ಕಾಳಗ

    ಬೆಂಗಳೂರು ಮೇ 18: ಇನ್ಸ್ಟಾಗ್ರಾಂ ನ ಪೋಸ್ಟ್ ವಿಚಾರಕ್ಕೆ ವಿಧ್ಯಾರ್ಥಿನಿಯರ ನಡುವೆ ನಡೆದ ವಾಗ್ವಾದ ಬೀದಿಯಲ್ಲಿ ಹೊಡೆದಾಟದ ಮಟ್ಟಕ್ಕೆ ಬಂದು ನಿಂತಿದೆ. ಬೆಂಗಳೂರಿನಲ್ಲಿ ಇಂದು ನಗರದ ಎರಡು ಪ್ರತಿಷ್ಠಿತ ಖಾಸಗಿ ಶಾಲೆ ವಿದ್ಯಾರ್ಥಿನಿಯರ ಬೀದಿಯಲ್ಲೇ ಹೊಡೆದಾಡಿಕೊಂಡಿದ್ದಾರೆ. ಬೀದಿಯಲ್ಲಿ ಬಡಿದಾಡಿಕೊಂಡ ವೀಡಿಯೋ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


    ಇನ್‍ಸ್ಟಾಗ್ರಾಮ್ ಮೆಸೇಜ್‍ನ ವಿಚಾರಕ್ಕೆ ಪ್ರಾರಂಭವಾದ ಗಲಾಟೆ ಬಳಿಕ ವಿದ್ಯಾರ್ಥಿನಿಯರು ನಡುವೆ ‘ನಮ್ಮ ಸ್ಕೂಲ್ ಟಾಪ್ ಸ್ಕೂಲ್’ ಎಂದು ಅವಾಜ್ ಹಾಕುತ್ತ ಕೆಟ್ಟ ಕೆಟ್ಟ ಪದಗಳನ್ನು ಬಳಸಿದ್ದಾರೆ. ಅಷ್ಟಕ್ಕೆ ಮುಗಿಯದೆ ವಿದ್ಯಾರ್ಥಿನಿಯರು, ಮನೆಯ ಬಳಿ ಬಂದು ಗಲಾಟೆ ಮಾಡ್ತೀನಿ, ಹೊಡಿತೀನಿ ಎಂದು ಬೆದರಿಕೆ ಹಾಕಿದ್ದಾರೆ.

    ಕೊನೆಗೂ ನಗರದ ಸೆಂಟ್ ಮಾಕ್ರ್ಸ್ ನಡು ರಸ್ತೆಯಲ್ಲೇ 20 ವಿದ್ಯಾರ್ಥಿನಿಯರು ಈ ಕುರಿತು ಮಾತನಾಡಲು ಪ್ರಾರಂಭ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ‘ನಮ್ಮ ಸ್ಕೂಲ್ ಅಂದ್ರೆ ಗೊತ್ತಾ? ನಮ್ಮ ಸ್ಕೂಲ್ ಟಾಪ್ ಸ್ಕೂಲ್’ ಎಂದು ಹಾಕಿಸ್ಪಿಕ್ ಹಿಡಿದು ಬಡಿದಾಡಿಕೊಂಡಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗಿದ್ದು, ವೈರಲ್ ಆಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply