Connect with us

DAKSHINA KANNADA

ಬೆಳ್ಳಂ ಬೆಳಗ್ಗೆ ಕಾರ್ಯಾಚರಣೆ ಮಾಡಿ ಅಕ್ರಮ ಗೋ ಮಾಂಸವನ್ನು ಪತ್ತೆ ಹಚ್ಚಿದ ಬಜರಂಗದಳ

ಮಂಗಳೂರು, ಅಕ್ಟೋಬರ್ 18: ಇಂದು ಬೆಳ್ಳಂ ಬೆಳಗ್ಗೆ ಕಾರ್ಯಾಚರಣೆ ನಡೆಸಿದ ಬಜರಂಗದಳದ ಕಾರ್ಯಕರ್ತರು ಅಕ್ರಮ ಗೋ ಮಾಂಸವನ್ನು ಪತ್ತೆ ಹಚ್ಚಿದ್ದಾರೆ. KA 63 2737 ನೋಂದಣಿಯ ಇಮ್ಮಾನುವೆಲ್ ಫಿಶ್ ಕೇರಿಯರ್ ಹೆಸರಿನ ಮೀನು ಸಾಗಾಟ ಮಾಡುವ ಟ್ರಕ್‌ ನಲ್ಲಿ ಭಾರಿ ಪ್ರಮಾಣದ ಈ ಅಕ್ರಮ ಗೋ ಮಾಂಸ ಕೊಂಡೊಯ್ಯಲಾಗುತ್ತಿತ್ತು.

ಇದರ  ಖಚಿತ ಮಾಹಿತಿ ಪಡೆದ ಕಾರ್ಯಕರ್ತರು ಕಣ್ಣೂರಿನಿಂದ ಬೆನ್ನಟ್ಟಿ ಬಂದು ನಗರದ ಪಂಪ್‌ ವೆಲ್ ಬಳಿ  ವಾಹನವನ್ನು ತಡೆ ಹಿಡಿದು ಕಂಕನಾಡಿ  ನಗರ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ.

ಟ್ರಕ್‌ ನಲ್ಲಿ ಸುಮಾರು 10 ಟನ್ ದನದ ಮಾಂಸ ವಾಹನದಲ್ಲಿ ಪತ್ತೆಯಾಗಿದೆ. ವಾಹನವನ್ನು ವಶಕ್ಕೆ ಪಡೆದ ಕಂಕನಾಡಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

ಹುಬ್ಬಳ್ಳಿಯಿಂದ ಮಂಗಳೂರಿಗೆ ಈ ಗೋಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರೋದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ. ಕಳೆದ ಒಂದು ವಾರದ ಹಿಂದೆ ಇದೇ ರೀತಿ ಹಾಲು ಸಾಗಾಟದ ಟೆಂಪೋದಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದಾಗ ಭಜರಂಗದಳದ ಕಾರ್ಯಕರ್ತರು ಅಡ್ಡ ಹಾಕಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿತ್ತು.

Facebook Comments

comments