DAKSHINA KANNADA
VHP ಮುಖಂಡ ಶರಣ್ ಪಂಪುವೆಲ್‌ಗೆ ಚಿತ್ರದುರ್ಗ ಪ್ರವೇಶಕ್ಕೆ ನಿಷೇಧ ಹೇರಿದ ಜಿಲ್ಲಾಡಳಿತ , ಬಜರಂಗದಳ ಖಂಡನೆ..!
ಮಂಗಳೂರು : ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್ (Sharan pumpwell) ಗೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆಯುವ ಹಿಂದೂ ಮಹಾಗಣಪತಿ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಸ್ಥಳಿಯಾಡಳಿತ ನಿರ್ಬಂಧ ಹೇರಿದೆ.
ನಿಷೇಧ ಹೇರಿದ ಜಿಲ್ಲಾಢಳಿತದ ಕ್ರಮವನ್ನು ಬಜರಂಗದಳ ತೀವ್ರವಾಗಿ ಖಂಡಿಸಿದೆ. ವಿಶ್ವ ಹಿಂದೂ ಪರಿಷದ್ ಹಿಂದೂ ಮಹಾಗಣಪತಿ ಮಹೋತ್ಸವ ಪ್ರಯುಕ್ತ ಸೆ. 22ರ ಭಾನುವಾರ ನಡೆಯಲಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಾಂತ ಕಾರ್ಯದರ್ಶಿಗಳಾದ ಶರಣ್ ಪಂಪುವೆಲ್ ಭಾಗವಹಿಸಬೇಕಾಗಿತ್ತು, ಆದರೆ ರಾಜ್ಯಸರಕಾರದ ಹಿಂದೂ ವಿರೋಧಿ ನೀತಿಯಿಂದಾಗಿ ಅವರನ್ನು ಚಿತ್ರದುರ್ಗ ಪ್ರವೇಶಿಸದಂತೆ ನಿರ್ಬಂಧ ಹಾಕಿದ್ದು ಅಲ್ಲದೆ ಪ್ರವೇಶಿಸಕ್ಕೆ ತಡೆಯೋಡ್ಡಿದ್ದಾರೆ. ರಾಜ್ಯ ಸರಕಾರದ ಕೈಗೊಂಬೆಯಂತೆ ವರ್ತಿಸುವ ಜಿಲ್ಲಾಡಳಿತದ ಈ ಕ್ರಮವನ್ನು ಖಂಡನೆ ಮಾಡುತ್ತೇವೆ. ಕರ್ನಾಟಕ ರಾಜ್ಯದಲ್ಲಿ ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ಸಂಘಟನೆಯ ಕಾರ್ಯಕರ್ತರ, ನಾಯಕರ ಮೇಲೆ ಸುಳ್ಳು ಕೇಸು ಹಾಕಿ ಅವರನ್ನು ಧಮನಿಸುವ ಕೆಲಸ ನಡೆಯುತ್ತಿದೆ. ವಿಶ್ವ ಹಿಂದೂ ಪರಿಷದ್ ಧಾರ್ಮಿಕ ಸಾಮಾಜಿಕ, ಸೇವಾ ಕಾರ್ಯಗಳ ಜೊತೆಗೆ ರಾಷ್ಟ್ರ ವಿರೋಧಿ ಕೃತ್ಯಗಳ, ಹಿಂದೂ ವಿರೋಧಿ ಕೃತ್ಯಗಳ ವಿರುದ್ಧ ನಿರಂತರ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. ಮುಸ್ಲಿಂ ಓಲೈಕೆಗೋಸ್ಕರ ಈ ರೀತಿಯ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ರಾಜ್ಯಸರಕಾರದ ಕ್ರಮವನ್ನು ಬಜರಂಗದಳ ಬಲವಾಗಿ ಖಂಡಿಸುತ್ತದೆ. ತಕ್ಷಣ ಶರಣ್ ಪಂಪುವೆಲ್ ರವರ ಮೇಲೆ ಹಾಕಿರುವ ನಿರ್ಬಂಧವನ್ನು ವಾಪಸು ಪಡೆಯಬೇಕೆಂದು ಪ್ರಾಂತ ಬಜರಂಗದಳ ಸಹ ಸಂಯೋಜಕರಾದ ಭುಜಂಗ ಕುಲಾಲ್ ಅಗ್ರಹಿಸಿದ್ದಾರೆ
You must be logged in to post a comment Login