ವೆಲಂಟೈನ್ಸ್ ಡೇ ನೆಪದಲ್ಲಿ ಹೂವಿನ ಅಂಗಡಿಗೆ ಬಜರಂಗದಳ ಕಾರ್ಯಕರ್ತರ ದಾಳಿ

ಮಂಗಳೂರು ಫೆಬ್ರವರಿ 14: ಪ್ರೇಮಿಗಳ ದಿನಾಚರಣೆ ಹಿನ್ನಲೆಯಲ್ಲಿ ಹೃದಯದ ಆಕಾರದಲ್ಲಿ ಹೂವಿನ ಅಲಂಕಾರ ಮಾಡಿ ವೆಲೆಂಟೈನ್ಸ್ ಡೇ ಸಂಭ್ರಮದಲ್ಲಿದ್ದ ಹೂವಿನ ಅಂಗಡಿ ಮೇಲೆ ಬಜರಂಗದಳದ ಕಾರ್ಯಕರ್ತರು ದಾಳಿ ಮಾಡಿರುವ ಘಟನೆ ನಡೆದಿದೆ.

ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಸಮೀಪ ಇರುವ ಐರಿಸ್ ಪ್ಲವರಿಸ್ಟ್ ಎಂಬ ಹೂವಿನ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಬೈಕಿನಲ್ಲಿ ಬಂದ ಮೂವರು ವೆಲಂಟೈನ್ಸ್ ಡೇ ನೆಪದಲ್ಲಿ ದಾಳಿ ನಡೆಸಿದ್ದಾರೆ. ಪ್ರೇಮಿಗಳ ದಿನಾಚರಣೆ ಹಿನ್ನಲೆಯಲ್ಲಿ ಅಂಗಡಿಯ ಕಲಾವಿದರು ಹೃದಯಾಕಾರದಲ್ಲಿ ಹೂವಿನ ಅಲಂಕಾರವನ್ನು ಅಂಗಡಿಯ ಮುಂಭಾಗದಲ್ಲಿ ನಿರ್ಮಿಸಿದ್ದರು.

ಬೈಕಿನಲ್ಲಿ ಬಂದ ಮೂವರು ಬಜರಂಗದಳ ಕಾರ್ಯಕರ್ತರು ಎನ್ನಲಾದ ದುಷ್ಕರ್ಮಿಗಳು ಕಲ್ಲೆಸೆದು, ಹೂವಿನ ಅಲಂಕಾರ ವನ್ನು ಪುಡಿಗಟ್ಟಿದ್ದಾರೆ.

ಸ್ಥಳಕ್ಕೆ ಕದ್ರಿ ಪೊಲೀಸರ ಆಗಮಿಸಿದ್ದು ಅಂಗಡಿಯ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ.

VIDEO

3 Shares

Facebook Comments

comments