Connect with us

    LATEST NEWS

    ಭಾಗೀರಥಿ ಜಯಂತಿಯಂದು ಉಡುಪಿಯಲ್ಲಿ ನಡೆದ ಪವಾಡ

    ಭಾಗೀರಥಿ ಜಯಂತಿಯಂದು ಉಡುಪಿಯಲ್ಲಿ ನಡೆದ ಪವಾಡ

    ಉಡುಪಿ ಜೂನ್ 12: ಬರಗಾಲದಿಂದ ಕುಡಿಯುವ ನೀರಿಗೂ ಹಾಹಾಕಾರ ಸ್ಥಿತಿಯಲ್ಲಿದ್ದ ಉಡುಪಿ ಜಿಲ್ಲೆಯಲ್ಲಿ ಪವಾಡವೊಂದು ನಡೆದಿದೆ. ಭಾಗೀರಥಿ ಜಯಂತಿ ದಿನವಾದ ಇಂದು ಉಡುಪಿಯ ಪಲಿಮಾರು ಶ್ರೀಗಳು ಭಾಗೀರಥಿಗೆ ಗಂಗಾರತಿ ಮಾಡುತ್ತಿದ್ದಂತೆ ಜಿಲ್ಲೆಯಲ್ಲಿ ಭಾರಿ ಮಳೆ ಸುರಿದಿದೆ.

    ಇಂದು ಭಾಗೀರಥಿಯ ಜನ್ಮದಿನ ದೇಶದಾದ್ಯಂತ ಭಾಗೀರಥಿಯ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಉಡುಪಿಯ ಕೃಷ್ಣ ಮಠದಲ್ಲೂ ಕೂಡ ಭಾಗೀರಥಿ ದೇವಿಯ ಸನ್ನಿಧಾನವಿದೆ. ಪರ್ಯಾಯ ಪಲಿಮಾರು ಸ್ವಾಮಿಗಳು ಭಾಗೀರಥಿಗೆ ಗಂಗಾರತಿ ಎತ್ತುತ್ತಿದ್ದಂತೆ ಉಡುಪಿಯಲ್ಲಿ ಧಾರಾಕಾರ ಮಳೆ ಆರಂಭವಾಗಿದೆ. ಇದು ಕಾಕತಾಳೀಯವೋ-ಕಾರಣಿಕವೋ ಗೊತ್ತಿಲ್ಲ, ಆದರೆ ಬರದಿಂದ ಕಂಗೆಟ್ಟಿದ್ದ ಉಡುಪಿ ಜಿಲ್ಲೆಗೆ ಮಳೆ ಆಸರೆಯಾಗಿದೆ.

    ಗಂಗೆ ಶಿವನ ತಲೆಯಿಂದ ಇಳಿದು ಬಂದ ದಿನವನ್ನು ಭಾಗೀರಥಿ ಜಯಂತಿ ಎಂದು ಕರೆಯಲಾಗುತ್ತದೆ. ಭೂಮಿಗೆ ಜಲವಿತ್ತ ಗಂಗೆಯ ತಂಗಿ ಭಾಗೀರಥಿ ದೇವಿ ಎಂಬುವುದು ಹಿಂದೂ ಧಾರ್ಮಿಕ ನಂಬಿಕೆ. ಭಗೀರಥ ಮುನಿಯು ತನ್ನ ಪೂರ್ವಜರ ಪಾಪದೋಷ ಕಳೆಯುವುದಕ್ಕಾಗಿಯೇ ಭಾಗೀರಥಿ ದೇವಿಯನ್ನು ತಪಸ್ಸಿನಿಂದ ಒಲಿಸಿಕೊಂಡ, ಆಕೆ ಇಳೆಗೆ ಇಳಿದು ಬರುವಂತೆ ಮಾಡಿದ ಅನ್ನೊದು ಪುರಾಣ.

    ಉಡುಪಿ ಶ್ರೀ ಕೃಷ್ಣ ಮಠಕ್ಕೂ ಭಾಗೀರಥಿ ದೇವಿಗೂ ನಂಟಿದೆ ಅನ್ನೊ ನಂಬಿಕೆ. ಆಚಾರ್ಯ ಮದ್ವರ ಭಕ್ತಿಗೆ ಒಲಿದ ಭಾಗೀರಥಿ ಉಡುಪಿ ಕೃಷ್ಣ ಮಠಕ್ಕೂ 12 ವರುಷಕ್ಕೊಮ್ಮೆ ಬರುತ್ತಾಳೆ ಅನ್ನೋದು ಪ್ರತೀತಿ. ಅದಮಾರು ಮಠ ಹಿರಿಯ ಶ್ರೀ ಪಾದರು‌ ಭಾಗೀರತಿ ದೇವಿಗಾಗಿಗೇ ಕೃಷ್ಣಮಠದ ಮಧ್ವ ಸರೋವರದದಲ್ಲಿ ಗುಡಿ ಕಟ್ಟಿ ಪೂಜೆ ಆರಂಭಿಸಿದರು. ವರ್ಷಂಪ್ರತಿ ಪರ್ಯಾಯ ಸ್ವಾಮಿಗಳು ಶ್ರೀ ಭಾಗೀರಥಿ ದೇವಿಗೆ ವಿಶೇಷವಾಗಿ ಪೂಜೆ ನಡೆಸುತ್ತಾರೆ . ಮಧ್ವ ಸರೋವರದ ದೇವಿಯ ಗುಡಿಯಲ್ಲಿ ಇಂದು ಕೂಡಾ ವಿಶೇಷ ಪೂಜೆ ನಡೆಸಲಾಯ್ತು.

    ಭಾಗೀರಥಿ ಜನ್ಮದಿನದಂದು ಮಧ್ವ ಸರೋವರ ತುಂಬಿ ತುಳುಕೋದು ಸಾಮಾನ್ಯ. ಆದರೆ ಈ ಬಾರಿ ಉಡುಪಿಗೆ ಬರ ತಟ್ಟಿದೆ. ಹಾಗಾಗಿ ತೆಪ್ಪೋತ್ಸವಕ್ಕೆ ಅವಕಾಶ ಇಲ್ಲದಂತಾಗಿದೆ. ತೆಪ್ಪೊತ್ಸವ ನಡೆದಿಲ್ಲವಾದ್ರೂ, ಪಲಿಮಾರು ವಿದ್ಯಾಧೀಶ ಶ್ರೀಪಾದರು ವಿಶೇಷ ವಾಗಿ ಪೂಜೆ ಸಲ್ಲಿಸಿ ಮಳೆಗಾಗಿ ಪ್ರರ್ಥಾನೆ ಸಲ್ಲಿಸುತ್ತಿದಂತೆ ಕೃಷ್ಣಮಠ ಸೇರಿದಂತೆ ಉಡುಪಿ ಜಿಲ್ಲೆಯ ಆಸುಪಾಸು ಜೋರಾಗಿಯೇ ಮಳೆ ಸುರಿಯಲಾರಂಭಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply