Connect with us

    KARNATAKA

    ವಿಮಾನದಲ್ಲಿ ಲಗೇಜ್ ನಿರ್ವಹಣೆಯ ವೈಫಲ್ಯ: ಖ್ಯಾತ ತಾಳವಾದ್ಯ ವಾದಕನ ಘಟಂ ಚೂರು ಚೂರು

    ಬೆಂಗಳೂರು, ಆಗಸ್ಟ್ 16: ವಿಮಾನದಲ್ಲಿನ ಲಗೇಜ್ ನಿರ್ವಹಣೆಯ ವೈಫಲ್ಯದಿಂದ ಖ್ಯಾತ ತಾಳವಾದ್ಯ ವಾದಕರೋರ್ವರ ಘಟಂ ವಾದ್ಯ ಚೂರು ಚೂರಾದ ಘಟನೆ ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

    ಬೆಂಗಳೂರಿನ ಗಿರಿಧರ್ ಉಡುಪ ಅವರ ಘಟಂ ವಾದ್ಯ ಸಂಪೂರ್ಣವಾಗಿ ಪುಡಿಪುಡಿಯಾಗಿದೆ.
    ಇವರು ಕಳೆದ ಬುಧವಾರ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಇಂಡಿಗೋ 6E 869 ವಿಮಾನದಲ್ಲಿ ದೆಹಲಿ ಪ್ರಯಾಣ ಬೆಳೆಸಿದ್ದು, ಗ್ರ್ಯಾಮಿ ವಿಜೇತ ರಿಕಿ ಕೇಜ್ ಅವರ ಸಂಗೀತ ಕಚೇರಿಯಲ್ಲಿ ಘಟಂ ವಾದ್ಯ ನುಡಿಸಬೇಕಿತ್ತು.

    ಸಂಗೀತ ಕಚೇರಿ ನೀಡುವ ಸಲುವಾಗಿ ತಮ್ಮ ನೀಲಿ ಬಣ್ಣದ ಸೂಟ್ ಕೇಸ್ ನಲ್ಲಿ ಘಟಂ ವಾದ್ಯವನ್ನ ಸುರಕ್ಷಿತವಾಗಿ ಪ್ಯಾಕ್ ಮಾಡಿದ್ದರು. ಆದರೆ, ದೆಹಲಿ ತಲುಪಿದ ನಂತರ ಸೂಟ್ ಕೇಸ್​​ನಲ್ಲಿದ್ದ ಘಟಂ ವಾದ್ಯ ಚೂರು ಚೂರಾಗಿತ್ತು. ಇದರಿಂದ ಸಂಗೀತ ಕಚೇರಿಯಲ್ಲಿ ಘಟಂ ವಆದ್ಯ ನುಡಿಸಲು ತೊಂದರೆಯಾಗಿತ್ತು.

    ಈ ಬಗ್ಗೆ ಇಂಡಿಗೋ ಸಂಸ್ಥೆಗೆ ದೂರು ನೀಡಿದರೂ 72 ಗಂಟೆಗಳ ತನಕ ಯಾವುದೇ ಸ್ಪಂದನೆ ಮಾಡಿರಲಿಲ್ಲ. ಘಟನೆ ಕುರಿತು ಗಿರಿಧರ್ ಉಡುಪ ತಮ್ಮ ನೋವು ತೊಡಿಕೊಂಡರು. ತಕ್ಷಣವೇ ಎಚ್ಚೆತ್ತ ಇಂಡಿಗೋ ಸಂಸ್ಥೆ ಘಟನೆ ಕುರಿತು ಕ್ಷಮೆ ಕೇಳಿದೆ ಮತ್ತು ಪರಿಹಾರ ಸಹ ಒದಗಿಸಿದೆ ಎಂದು ತಿಳಿದು ಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply