Connect with us

    KARNATAKA

    CCTV Video: ಅಪಾರ್ಟ್ ಮೆಂಟ್ ನ ಎರಡನೇ ಮಹಡಿಯಿಂದ ಬಿದ್ದ 3 ವರ್ಷದ ಮಗು…ಸ್ಥಿತಿ ಗಂಭೀರ

    ಬೆಂಗಳೂರು ಮಾರ್ಚ್ 10: ಮೂರು ವರ್ಷದ ಮಗುವೊಂದು ಆಟವಾಡುತ್ತಾ ಅಪಾರ್ಟ್‌ಮೆಂಟ್‌ನ ಎರಡನೇ ಮಹಡಿಯ ಬಾಲ್ಕನಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದೆ. ನಗರದ ಕೆಂಗೇರಿ ಸಮೀಪದ ಬಿಡಿಎ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ.

    ಶಿವಪ್ಪ ದಂಪತಿಯ ಪುತ್ರ ಮೂರು ವರ್ಷದ ರಾಹುಲ್ ಮನೆಯ ಬಾಲ್ಕನಿಯಲ್ಲಿ ಬಾಲಕ ಚೇರ್ ಹಾಕಿಕೊಂಡು ಅದರ ಮೇಲೆ ಬೆಡ್ ಶೀಟ್‌ ಹಾಕಿದ್ದಾನೆ. ನಂತರ ಅದರ ಮೇಲೆ ಹತ್ತಲು ಹೋಗಿ ಕೆಳಗೆ ಬಿದ್ದಿದ್ದಾನೆ. ನೆಲಕ್ಕೆ ಬಿದ್ದ ರಭಸಕ್ಕೆ ತಲೆಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ತಲೆಗೆ ಬಲವಾದ ಪೆಟ್ಟು ಬಿದ್ದಿರುವ ಹಿನ್ನೆಲೆಯಲ್ಲಿ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಭೀಕರ ದೃಶ್ಯ ಇಲ್ಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply