Connect with us

BELTHANGADI

ಹೆಣ್ಣು ಮರಿಗೆ ಜನ್ಮ ನೀಡಿದ ಧರ್ಮಸ್ಥಳದ ಆನೆ…!!

ಬೆಳ್ತಂಗಡಿ ಜುಲೈ 1 : ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ್ಮೀ ಹೆಸರಿನ ಆನೆ ಇಂದು ಮುಂಜಾನೆ ಹೆಣ್ಣು ಮರಿಗೆ ಜನ್ಮ ನೀಡಿದೆ. ತಾಯಿ ಆನೆ ಹಾಗೂ ಮರಿ ಇಬ್ಬರೂ ಆರೋಗ್ಯವಾಗಿದ್ದು, ಮಾವುತರು ಆನೆ ಮರಿಗೆ ಉಪಚಾರ ನಡೆಸುತ್ತಿದ್ದಾರೆ.


ಸಚಿವ ಆನಂದ್ ಸಿಂಗ್ ಅವರು ಧರ್ಮಸ್ಥಳಕ್ಕೆ ಈ ಆನೆಯನ್ನು ನೀಡಿದ್ದರು. ತುಂಟಾಟದಿಂದ ಧರ್ಮಸ್ಥಳದಲ್ಲಿ ಲಕ್ಷ್ಮೀ ಅಚ್ಚುಮೆಚ್ಚಾಗಿತ್ತು. ಅಲ್ಲದೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರಿಗೆ ಪ್ರೀತಿ ಪಾತ್ರವಾಗಿತ್ತು. ವೀರೇಂದ್ರ ಹೆಗ್ಗಡೆಯವರು ಇಂದು ಆನೆ ಮರಿಯನ್ನು ವೀಕ್ಷಿಸಿ ಮುದ್ದಾಡಿದರು.

 

Facebook Comments

comments