Connect with us

    LATEST NEWS

    ಸೆಲ್ಫಿ ಕ್ರೆಜ್ ಗೆ 4 ವರ್ಷದ ಬಾಲಕಿ ಸಮುದ್ರ ಪಾಲು

    ಸೆಲ್ಫಿ ಕ್ರೆಜ್ ಗೆ 4 ವರ್ಷದ ಬಾಲಕಿ ಸಮುದ್ರ ಪಾಲು

    ಮಂಗಳೂರು, ಡಿಸೆಂಬರ್ 25: ಉಳ್ಳಾಲದ ಸೋಮೇಶ್ವರ ಬೀಚ್ ನಲ್ಲಿ ಸೆಲ್ಪಿ ತೆಗೆಯಲು ಹೋದ ಕುಟುಂಬ ಅಲೆಯ ಹೊಡೆತಕ್ಕೆ ಸಿಲುಕಿ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ನಡೆದಿದೆ.

    ಮೃತ ಬಾಲಕಿಯನ್ನು ನಾಲ್ಕು ವರ್ಷದ ಮೈತ್ರಿ ಕೇದ್ಕಾರ್ ಎಂದು ಗುರುತಿಸಲಾಗಿದೆ. ಸಾಲು ಸಾಲು ರಜೆಯ ಹಿನ್ನಲೆ ಮಂಗಳೂರಿಗೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ಮೂಲದ ಕುಟುಂಬವೊಂದು ಮಂಗಳೂರಿನ ಸೋಮೇಶ್ವರ ಬೀಚ್ ನಲ್ಲಿ ಸೆಲ್ಪಿ ತೆಗೆಯುವಾಗ ಈ ಘಟನೆ ನಡೆದಿದೆ.

    ಬೆಂಗಳೂರಿನಿಂದ ಮಂಗಳೂರಿಗೆ ಪ್ರವಾಸಕ್ಕೆ ಆಗಮಿಸಿದ್ದ ಚಿಂತಾಮಣಿ ಕೇದ್ಕಾರ್, ಶ್ರದ್ದಾ ಕೇದ್ಕಾರ್ ಮತ್ತು ಅವರ ಮಕ್ಕಳಾದ ಏಳು ವರ್ಷದ ಜಾರ್ಜಿ ಕೇದ್ಕಾರ್ ಹಾಗೂ ಮೈತ್ರೇಯಿ ಕೇದ್ಕಾರ್ ಸೋಮೇಶ್ವರ ಬೀಚ್ ಗೆ ತೆರಳಿದ್ದರು. ಬೆಳಿಗ್ಗೆ ದೇವರ ದರ್ಶನದ ನಂತರ ಸಮುದ್ರ ಕಿನಾರೆಗೆ ತೆರಳಿ ಅಲ್ಲಿ ಬಂಡೆಯ ಮೇಲೆ ನಿಂತು ಸೆಲ್ಪಿ ತೆಗೆಯುತ್ತಿದ್ದರು. ಈ ಸಂದರ್ಭದಲ್ಲಿ ಏಕಾ ಏಕಿ ಅಪ್ಪಳಿದ ಬೃಹತ್ ಅಲೆ ನಾಲ್ವರನ್ನು ಕೊಚ್ಚಿಕೊಂಡು ಹೋಗಿದೆ.

    ಕೂಡಲೇ ಸ್ಥಳದಲ್ಲಿ ಇದ್ದ ಜೀವರಕ್ಷಕ ಸಿಬ್ಬಂದಿ ಅಶೋಕ್ ನೀರುಪಾಲಾಗಾತ್ತಿದ್ದವರನ್ನು ರಕ್ಷಿಸಿ ದಡಕ್ಕೆ ತಂದಿದ್ದಾರೆ. ಆದರೆ 4 ವರ್ಷದ ಬಾಲಕಿ ಮೈತ್ರಿ ಅದಾಗಲೇ ಮೃತಪಟ್ಟಿದ್ದಳು.

    ಇಂಡೋನೇಷ್ಯಾದಲ್ಲಿ ಸಂಭವಿಸಿದ್ದ ಪ್ರಕೃತಿ ವಿಕೋಪದಿಂದಾಗಿ ಸೋಮವಾರ ಸೋಮೇಶ್ವರ ಬೀಚ್ ನಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply