Connect with us

    KARNATAKA

    ತಲೆ ಮೇಲೆ ತೆಂಗಿನಕಾಯಿ ಬಿದ್ದು 11 ತಿಂಗಳ ಮಗು ಸಾವು

    ಹಾವೇರಿ : ತಾಯಿ ಜೊತೆ ಊಟ ಮಾಡುತ್ತಿದ್ದ 11 ತಿಂಗಳ ಮಗುವಿನ ಮೇಲೆ ತೆಂಗಿನ ಕಾಯಿ ಬಿದ್ದ ಪರಿಣಾಮ ತೀವ್ರ ಗಾಯಗೊಂಡಿದ್ದ ಮಗು ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಹಂಸಭಾವಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಹಂಸಭಾವಿಯ ಮಲ್ಲಿಕಾರ್ಜುನ ವಾಲ್ಮೀಕಿ ಹಾಗೂ ಮಾಲಾ ದಂಪತಿಯ 11 ತಿಂಗಳ ಮಗು ತನ್ವೀತ್‌ ಮೃತಪಟ್ಟ ಕಂದಮ್ಮ.


    ಮನೆ ಎದುರು ತಾಯಿ ತನ್ನ ಮಗ ತನ್ವೀತ್‌ನಿಗೆ ಊಟ ಮಾಡಿಸುತ್ತಿದ್ದ ಸಂದರ್ಭ ಮರದ ಮೇಲಿಂದ ತೆಂಗಿನಕಾಯಿ ತಲೆಯ ಮೇಲೆ ಬಿದ್ದ ಪರಿಣಾಮ ತೀವ್ರ ಗಾಯಗೊಂಡಿದ್ದ ಮಗುವನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮಗು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply