Connect with us

    LATEST NEWS

    7 ದಿನದ ಕಂದಮ್ಮನಿಗೆ ಕೊರೊನಾ ಸೊಂಕು

    ಮಂಗಳೂರು, ಜುಲೈ 02: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ದಿನದಿಂದ ದಿನಕ್ಕೆ ತನ್ನ ಕಂಬಂಧ ಬಾಹುವನ್ನು ಚಾಚುತ್ತಲೇ ಇದ್ದು , ಜಿಲ್ಲೆಯಲ್ಲಿ 7 ದಿನದ ಕಂದಮ್ಮನಲ್ಲೂ ಕೊರೊನಾ ಸೋಂಕು ದೃಢಪಟ್ಟಿದೆ.


    ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಜನಿಸಿದ ಈ ಮಗುವಿನ ತಾಯಿಗೆ ಜೂನ್ 28 ರಂದು ಕೊರೊನಾ ಸೊಂಕು ಇರುವುದು ದೃಢಪಟ್ಟಿತ್ತು. ಈಗ ತಾಯಿಯ ಸಂಪರ್ಕದಿಂದಲೇ 7 ದಿನದ ಕಂದಮ್ಮನಿಗೂ ಕೊರೊನಾ ಸೊಂಕು ಬಂದಿದೆ. ಇದೀಗ ಕಂದಮ್ಮನನ್ನು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ನಿನ್ನೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪತ್ತೆಯಾದ 84 ಪ್ರಕರಣಗಳಲ್ಲಿ ಶಾರ್ಜಾದಿಂದ ಬಂದ 6 ಮಂದಿ, ಹೊರರಾಜ್ಯದಿಂದ ಬಂದ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಆತಂಕಕ್ಕೆ ಕಾರಣವಾಗಿರುವುದು 28 ಐಎಲ್ಐ ಪ್ರಕರಣ. 38 ಪ್ರಾಥಮಿಕ ಸಂಪರ್ಕದಿಂದ ಹರಡಿದ ಸೋಂಕು ಮತ್ತು 11 ಮಂದಿಯ ಸಂಪರ್ಕವೇ ತಿಳಿದುಬಂದಿಲ್ಲ.

    Share Information
    Advertisement
    Click to comment

    You must be logged in to post a comment Login

    Leave a Reply