ರಾಷ್ಟ್ರದ ಪ್ರಶ್ನೆ ಬಂದಾಗ ಜನರಿಗೆ ಅಸಹ್ಯ ಹುಟ್ಟಿಸುವ ಮಾತನಾಡಬಾರದು – ಕೋಟ ಶ್ರೀನಿವಾಸ ಪೂಜಾರಿ

ಉಡುಪಿ ಮಾರ್ಚ್ 7: ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿ ಮೋದಿ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ನಡುವಿನ ಮ್ಯಾಚ್ ಫಿಕ್ಸಿಂಗ್ ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆಗೆ ವಿಧಾನಪರಿಷತ್ ವಿರೋಧಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು ನೇರ ನಡೆ ನುಡಿಯ ವ್ಯಕ್ತಿ ಎಂದು ನಾನಂದುಕೊಂಡಿದ್ದ ಹರಿಪ್ರಸಾದ್ ಬಾಯಿಂದ ಇಂತಹ ಮಾತುಗಳನ್ನು ನಿರೀಕ್ಷಿಸಿರಲಿಲ್ಲ. ಸೈನಿಕರು ರಕ್ತ ತರ್ಪಣೆ ಮಾಡಿ ಪಾಕ್‌ ಪ್ರೇರಿತ ಭಯೋತ್ಪಾದಕರನ್ನು ಧೂಳಿಪಟ ಮಾಡಿದ ಬಗ್ಗೆ ಹೆಮ್ಮೆ ಪಡಬೇಕೆ ಹೊರತು, ಮೋದೀಜಿ ಮೇಲಿನ ದ್ವೇಷದಿಂದ ಸೈನಿಕರಿಗೆ ಅಪಮಾನ‌ ಮಾಡಬಾರದಿತ್ತು.

ಕಸಬ್ ತಂಡದ ಮುಂಬೈ ದಾಳಿಯೂ ಸೇರಿದಂತೆ ಕಾಂಗ್ರೇಸ್ ಕಾಲದಲ್ಲಿ ನಡೆದದ್ದೆಲ್ಲಾ ಮ್ಯಾಚ್ ಪಿಕ್ಸಿಂಗಾ??? ರಾಷ್ಟ್ರದ ಪ್ರಶ್ನೆ ಬಂದಾಗ ಜನರಿಗೆ ಅಸಹ್ಯ ಹುಟ್ಟಿಸುವ ಮಾತನಾಡಬಾರದು. ಇದು ಕಾಂಗ್ರೆಸ್ ಮುಖಂಡರಿಗೆ ಅರ್ಥವಾಗಬೇಕು. ಎಂದು ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

Facebook Comments

comments