ಆಟೋ ರಿಕ್ಷಾ ಮತ್ತು ಖಾಸಗಿ ಬಸ್ ಡಿಕ್ಕಿ ತಂದೆ ಮಗ ಗಂಭೀರ

ಉಡುಪಿ ಜೂನ್ 19: ಅಟೋ ರಿಕ್ಷಾ ಮತ್ತು ಖಾಸಗಿ ಬಸ್ ಮುಖಾಮುಖಿ ಅಪಘಾತದಲ್ಲಿ ತಂದೆ ಮಗ ಗಂಭೀರ ಗಾಯಗೊಂಡ ಘಟನೆ ಉಡುಪಿ ಹೊರವಲಯದ ಕೊರಂಗ್ರಪಾಡಿ ಎಂಬಲ್ಲಿ ನಡೆದಿದೆ.

ತನ್ನದೇ ರಿಕ್ಷಾದಲ್ಲಿ ಮಗನನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭ ಎದುರಿನಿಂದ ಬಂದ್ ಖಾಸಗಿ ಬಸ್ ಗೆ ರಿಕ್ಷಾ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ರಿಕ್ಷಾದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಉಡುಪಿ ಸಂಚಾರ ಪೋಲಿಸರು ಭೇಟಿ ನೀಡಿ ಅಪಘಾತಗೊಂಡ ವಾಹನಗಳ ತೆರವುಗೊಳಿಸಿದ್ದಾರೆ.

Facebook Comments

comments