Connect with us

    LATEST NEWS

    ಕಾರು ಅಪಘಾತಕ್ಕೆ ಬಲಿಯಾದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆ್ಯಂಡ್ರ್ಯೂ ಸೈಮಂಡ್ಸ್‌

    ಆಸ್ಟ್ರೇಲಿಯಾ ಮೇ 15: ಕಾರು ಅಪಘಾತವೊಂದರಲ್ಲಿ ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟ್‌ ಆಟಗಾರ ಆ್ಯಂಡ್ರ್ಯೂ ಸೈಮಂಡ್ಸ್‌ ಸಾವನಪ್ಪಿರುವ ಘಟನೆ ನಡೆದಿದೆ.

    ಟೌನ್ಸ್‌ವಿಲ್ಲೆಯಿಂದ ಸುಮಾರು 50 ಕಿ.ಮೀ. ವ್ಯಾಪ್ತಿಯ ಹಾರ್ವೇ ರೇಂಜ್‌ ಎಂಬಲ್ಲಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಮಧ್ಯರಾತ್ರಿ 11ರ ಸುಮಾರಿಗೆ ಹಾರ್ವೇ ರೇಂಜ್‌ ರಸ್ತೆಯಲ್ಲಿ ಸೈಮಂಡ್ಸ್‌ ಕಾರು ಚಲಾಯಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಸೈಮಂಡ್ಸ್‌ ಒಬ್ಬರೇ ಇದ್ದರು. ಅಲೈಸ್‌ ರಿವರ್‌ ಬ್ರಿಡ್ಜ್‌ ಸಮೀಪ ನಿಯಂತ್ರಣ ತಪ್ಪಿದ ಕಾರು ರಸ್ತೆಯಿಂದ ಹೊರಗೆ ಸಂಚರಿಸಿ, ಪಲ್ಟಿಯಾಗಿದೆ ಎಂದು ಪೊಲೀಸರು ವರದಿಯಲ್ಲಿ ಹೇಳಿದ್ದಾರೆ.

    ಸೈಮಂಡ್ಸ್ ಒಬ್ಬ ಪ್ರಪಂಚದ ಅತ್ಯುತ್ತಮ ಆಲ್ ರೌಂಡರ್ ಎಂದು ಹೆಸರುಗಳಿಸಿದ್ದು, 1998ರಿಂದ 2009 ನಡುವೆ ಒಟ್ಟು 198 ಏಕದಿನ, 26 ಟೆಸ್ಟ್‌ ಹಾಗೂ 14 ಟಿ-20 ಪಂದ್ಯಗಳಲ್ಲಿ ಸೈಮಂಡ್ಸ್‌ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದಾರೆ. 2003 ಮತ್ತು 2007ರ ವಿಶ್ವಕಪ್‌ ಗೆಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply