Connect with us

    LATEST NEWS

    ಶ್ರದ್ಧಾ ವಾಕರ್‌ ಹಂತಕ ಅಫ್ತಾಬ್ ಹತ್ಯೆಗೆ ಯತ್ನ – ಪೊಲೀಸ್ ವ್ಯಾನ್ ಮೇಲೆ ದಾಳಿ

    ನವದೆಹಲಿ, ನವೆಂಬರ್ 29: ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಗೆಳತಿ ಶ್ರದ್ಧಾ ವಾಕರ್‌ನನ್ನು ಭೀಕರವಾಗಿ ಹತ್ಯೆ ಮಾಡಿದ್ದ ಅಫ್ತಾಬ್ ಅಮೀನ್ ಪೂನಾವಾಲ  ಹತ್ಯೆಗೆ ಸೋಮವಾರ ಯತ್ನಿಸಲಾಗಿದೆ.

    ಕತ್ತಿ ಹಿಡಿದುಬಂದ ಗುಂಪೊಂದು ಪೊಲೀಸ್ ವ್ಯಾನ್ ಮೇಲೆ ಏಕಾ-ಏಕಿ ದಾಳಿ ಮಾಡಿದೆ. ದೆಹಲಿಯ ರೋಹಿಣಿಯಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ 2ನೇ ಪಾಲಿಗ್ರಾಫ್ ಪರೀಕ್ಷೆ  ನಡೆಸಿ ಮರಳಿ ಜೈಲಿಗೆ ಕರೆದೊಯ್ಯುವಾಗ ದಾಳಿ ನಡೆದಿದೆ.

    15 ಜನರ ಗುಂಪು ಕತ್ತಿ ಹಿಡಿದು ಏಕಾ-ಏಕಿ ದಾಳಿ ನಡೆಸಿದೆ. ಅಲ್ಲದೇ ಆ ಗುಂಪು ಅಫ್ತಾಬ್‌ನನ್ನೇ ಹುಡುಕುತ್ತಿತ್ತು. ಅದು ಬಲಪಂಥೀಯರ ಗುಂಪಿನಂತೆ ಕಂಡುಬಂದಿದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ತಕ್ಷಣ ಜಾಗೃತರಾದ ಪೊಲೀಸರು ದಾಳಿಯನ್ನು ಹತ್ತಿಕ್ಕಿ, ಅಫ್ತಾಬ್‌ನನ್ನು ರಕ್ಷಣೆ ಮಾಡಿದ್ದಾರೆ. ದಾಳಿಗೆ ಯತ್ನಿಸಿದ ಕೆಲವರು ಗಾಯಗೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply