Connect with us

    LATEST NEWS

    ಅತ್ತಾವರ – ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸ್ ದಾಳಿ – ಪಿಯುಸಿ ವಿಧ್ಯಾರ್ಥಿನಿಯರ ರಕ್ಷಣೆ

    ಮಂಗಳೂರು, ಫೆಬ್ರವರಿ 03: ಪಿಯುಸಿ ವಿಧ್ಯಾರ್ಥಿನಿಯರನ್ನು ವೈಶ್ಯಾವಾಟಿಕೆ ದಂಧೆಗೆ ಬಳಸುತ್ತಿದ್ದ ಮೂವರು ಆರೋಪಿಗಳನ್ನು ಮಹಿಳಾ ಪೊಲೀಸರು ಬಂಧಿಸಿದ್ದಾರೆ.


    ಖಚಿತ ಮಾಹಿತಿ ಮೇರೆಗೆ ನಗರದ ಅತ್ತಾವರದ ನಂದಿಗುಡ್ಡೆ ಬಳಿ ಅಪಾರ್ಟ್ ಮೆಂಟ್ ಒಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಪೊಲೀಸರು ದಾಳಿ ನಡೆಸಿ ಇಬ್ಬರು ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿಯರ ಸಹಿತ ನಾಲ್ವರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.


    ವಯಸ್ಕ ಯುವತಿಯರನ್ನು ನಿರಂತರವಾಗಿ ದಂಧೆಗೆ ಬಳಸಿಕೊಳ್ಳುತ್ತಿರುವುದು ತನಿಖೆ ವೇಳೆ ಕಂಡು ಬಂದಿದ್ದು, ರಕ್ಷಣೆ ಮಾಡಲಾದ ಸಂತ್ರಸ್ತೆಯರು ಪಿಯುಸಿ ವಿದ್ಯಾರ್ಥಿನಿಯರಾಗಿದ್ದು, ತಮ್ಮ ಮೇಲಾದ ದೌರ್ಜನ್ಯವನ್ನು ಕಾಲೇಜಿನ ಮುಖ್ಯಸ್ಥೆಯ ಬಳಿ ಹೇಳಿಕೊಂಡಿದ್ದಾರೆ.
    ವೇಶ್ಯಾವಾಟಿಕೆ ನಡೆಸಲಾಗುತ್ತಿದ್ದ ಮನೆಯಲ್ಲಿ ಸಿಸಿಟಿವಿ ಅಳವಡಿಸಿ ವಿದ್ಯಾರ್ಥಿನಿಯರಿಗೆ ವಿಡಿಯೋ ಬಯಲು ಮಾಡಿ ಮಾನ ಹರಾಜು ಹಾಕುವುದಾಗಿ ಬೆದರಿಕೆ ಹಾಕಲಾಗುತ್ತಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply