Connect with us

    LATEST NEWS

    ಗಾಯಕ ಸೋನು ನಿಗಮ್‌ ತಂಡದ ಮೇಲೆ ಮುಂಬೈನಲ್ಲಿ ದಾಳಿ: ಶಿವಸೇನಾ ಶಾಸಕನ ಪುತ್ರನಿಂದ ಹಲ್ಲೆ

    ಮುಂಬೈ, ಫೆಬ್ರವರಿ 21: ಸೋಮವಾರ ರಾತ್ರಿ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ಗಾಯಕ ಸೋನು ನಿಗಮ್ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ವಿಚಾರವಾಗಿ ಜಗಳ ನಡೆದಿದೆ. ಈ ವೇಳೆ ಸೋನು ನಿಗಮ್‌ ಅವರ ಸಹೋದ್ಯೋಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಚೆಂಬೂರ್‌ನಲ್ಲಿ ಆಯೋಜಿಸಿದ್ದ ಸಂಗೀತೋತ್ಸವದಲ್ಲಿ ಸೋನು ನಿಗಮ್ ಪಾಲ್ಗೊಂಡಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಂಗೀತೋತ್ಸವದಿಂದ ಹೊರಡುವಾಗ ಗುಂಪೊಂದು ಸೆಲ್ಫಿಗಾಗಿ ಸೋನು ನಿಗಮ್‌ ಅವರ ಮೇಲೆ ಮುಗಿಬಿದ್ದಿದೆ. ಆಗ ಅವರ ಇಬ್ಬರು ಸಹೋದ್ಯೋಗಿಗಳು ಅಡ್ಡಬಂದಿದ್ದಾರೆ. ಆಗ ಅವರಿಬ್ಬರ ಮೇಲೂ ಹಲ್ಲೆ ನಡೆದಿದೆ. ಇಬ್ಬರ ಪೈಕಿ ಒಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಮಾಧ್ಯಮ ವರದಿಗಳ ಪ್ರಕಾರ, ಶಿವಸೇನಾದ (ಉದ್ಧವ್‌ ಠಾಕ್ರೆ ಬಣದ) ಸ್ಥಳೀಯ ಶಾಸಕರ ಮಗ ಸೋನು ನಿಗಮ್‌ ಮ್ಯಾನೇಜರ್‌ನೊಂದಿಗೆ ಅನುಚಿತವಾಗಿ ವರ್ತಿಸಿದ್ದೂ ಅಲ್ಲದೇ ಹಲ್ಲೆ ನಡೆಸಿದ್ದ ಎಂದು ಹೇಳಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply