Connect with us

    LATEST NEWS

    ಮೂರನೇ ಕ್ಲಾಸ್ ಪಾಸಾದ 96 ವರ್ಷದ ಕಾತ್ಯಾಯಿನಿ ಅಮ್ಮ

    ಮೂರನೇ ಕ್ಲಾಸ್ ಪಾಸಾದ 96 ವರ್ಷದ ಕಾತ್ಯಾಯಿನಿ ಅಮ್ಮ

    ಕೇರಳ ಅಗಸ್ಟ್ 7: ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಸುದ್ದಿ ಮಾಡಿದ ಕೇರಳದ ಅಜ್ಜಿ ಕಾತ್ಯಾಯಿನಿ ಅಮ್ಮ ತೇರ್ಗಡೆ ಹೊಂದಿದ್ದಾರೆ. ಕೇರಳ ಅಲೆಪ್ಪಿಯ 96 ವರ್ಷದ ಕಾತ್ಯಾಯಿನಿ ಅಮ್ಮ ಮೊನ್ನೆ ರವಿವಾರ ನಡೆದ ಪರೀಕ್ಷೆಯಲ್ಲಿ ಮೂರನೇ ತರಗತಿ ಪಾಸಾಗಿದ್ದು, ನಾಲ್ಕನೇ ತರಗತಿಗೆ ಪ್ರವೇಶ ಪಡೆದಿದ್ದಾರೆ.

    ಕೇರಳ ರಾಜ್ಯಾದ್ಯಂತ ಸುಮಾರು 45 ಸಾವಿರ ಹಿರಿಯ ನಾಗರಿಕರು ಸಾಕ್ಷರತಾ ಮಿಷನ್ ಹಮ್ಮಿಕೊಂಡ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಇವರಲ್ಲಿ ಕಾತ್ಯಾಯಿನಿ ಅಜ್ಜಿ ಅತ್ಯಂತ ಹಿರಿ ವಯಸ್ಸಿನವರಾಗಿದ್ದು, ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ್ದಾರೆ.

    45 ಇತರ ವಿದ್ಯಾರ್ಥಿಗಳೊಂದಿಗೆ ಕಾತ್ಯಾಯಿನಿ ಅಜ್ಜಿ ಪರೀಕ್ಷೆಗೆ ಹಾಜರಾಗಿದ್ದು, ಓದುವಿಕೆಯಲ್ಲಿ 30 ಅಂಕ. ಮಲೆಯಾಳಂ ಬರೆಯುವುದರಲ್ಲಿ 40 ಅಂಕ, ಗಣಿತದಲ್ಲಿ 30 ಹೀಗೇ ಶೇಕಡ 100 ರಷ್ಟು ಅಂಕಗಳನ್ನು ಪಡೆದಿದ್ದಾರೆ.

    ರಾಜ್ಯ ಸಾಕ್ಷರತಾ ಮಿಷನ್ ಬೋಧಕರಾದ ಕೆ. ಸತಿ ಅವರ ಮುಂದೆ ಕಾತ್ಯಾಯಿನಿ ಅಮ್ಮ ತಮ್ಮ ಓದುವ ಹಂಬಲವನ್ನು ಬಿಚ್ಚಿಟ್ಟಾಗ ಅವರು ಒಮ್ಮೆ ಅಚ್ಚರಿಗೊಳಗಾಗಿದ್ದರು. , ಆದರೆ ಕಾತ್ಯಾಯಿನಿ ಅಮ್ಮ ಅವರ ಈ ದೃಢ ನಿರ್ಧಾರ ಕಂಡ ಸತಿ ಅವರು ಅವರನ್ನು ವಿದ್ಯಾರ್ಥಿಗಳ ಪಟ್ಟಿಯಲ್ಲಿ ಸೇರಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply