LATEST NEWS
ಕೊನೆಗೂ ವೇತನ ಪಡೆದ ಅಸ್ಸಾಂ ಮೂಲದ ಕಾರ್ಮಿಕರು
ಮಂಗಳೂರು ಜುಲೈ 23: ಮಂಗಳೂರಿನ SEZ ವ್ಯಾಪ್ತಿಯ AOT ಫಿಶ್ ಮಿಲ್ ನಲ್ಲಿ ಅಸ್ಸಾಂ ಮೂಲದ ವಲಸೆ ಕಾರ್ಮಿಕರಿಗೆ ಸಂಬಳ ನೀಡದೆ ಗುತ್ತಿಗೆದಾರ ವಂಚಿಸಿದ ಪ್ರಕರಣ ಒಂದು ಹಂತದ ಸುಖಾಂತ್ಯ ಕಂಡಿದೆ. SEZ ಜನರಲ್ ಮ್ಯಾನೇಜರ್ ಹಿಟಾ ಶ್ರೀನಿವಾಸ ರಾಜು ಮಧ್ಯಸ್ಥಿಕೆಯಲ್ಲಿ ಮೂರು ದಿನಗಳ ಹಿಂದೆ ನಡೆದ ಮಾತುಕತೆಯಲ್ಲಿ AOT ಯ ಸ್ಥಳೀಯ ಪಾಲುದಾರರು ಕಾರ್ಮಿಕರಿಗಾಗಿ ಆಗುತ್ತಿರುವ ಸಮಸ್ಯೆಗಳನ್ನು ಆಲಿಸಿ, 15 ಮಂದಿ ಕಾರ್ಮಿಕರಿಗೆ ಎರಡು ತಿಂಗಳ ಭಾಕಿ ವೇತನ ನೀಡಲು ಕಂಪೆನಿ ಪಾಲದಾರರು ಒಪ್ಪಿಕೊಂಡಿದ್ದಾರೆ.
ಲಾಕ್ ಡೌನ್ ಸಂದರ್ಭ AOT ಕಂಪೆನಿಯ ಸ್ಥಳೀಯ ಗುತ್ತಿಗೆದಾರರ ಅಸ್ಸಾಂನ ಕಾರ್ಮಿಕರಿಗೆ ಸಂಬಳ ನೀಡದೆ ವಂಚಿಸಿದ್ದು, ಈ ಕುರಿತಂತೆ ಡಿವೈಎಫ್ ಐ ಸೇರಿದಂತೆ ವಿವಿಧ ಸಂಘಟನೆಗಳು ಕಾರ್ಮಿಕರಿಕೆ ಸಂಬಳ ಸೇರಿದಂತೆ ಕನಿಷ್ಟ ಕೂಲಿ, ಪಿಎಫ್, ಇಎಸ್ಐ ಸೇರಿದಂತೆ ವಿವಿಧ ಸೌಲಭ್ಯ ನೀಡುವಂತೆ ಒತ್ತಾಯಿಸಿದ್ದರು. ಈ ಹಿನ್ನಲೆ ಕಂಪೆನಿ ಹಾಗೂ ಸಂಘಟನೆಗಳೊಂದಿಗೆ ಮಾತುಕತೆ ಒಂದು ಹಂತಕ್ಕೆ ಫಲಪ್ರದವಾಗಿ 15 ಕಾರ್ಮಿಕರಿಗೆ ಗುತ್ತಿಗೆದಾರ ವಂಚಿಸಿರುವ ಎರಡು ತಿಂಗಳ ಬಾಕಿ ವೇತನ 16 ಸಾವಿರ ರೂಪಾಯಿ ಪಾವತಿಸಲು ಕಂಪೆನಿಯ ಪಾಲುದಾರರು ಒಪ್ಪಿಕೊಂಡರು.
ಹಾಗೆಯೆ ಸಂಬಳದಲ್ಲಿ ಹೆಚ್ಚಳ, ಪಿಎಫ್, ಇಎಸ್ಐ ಸೌಲಭ್ಯಗಳನ್ನು ಗುತ್ತಿಗೆದಾರರು ಕಡ್ಡಾಯವಾಗಿ ನೀಡುವಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ಈಗ ಉದ್ಯೋಗವಿಲ್ಲದೆ ಕಂಪೆನಿಯ ವಸತಿಯಲ್ಲಿ ಬಾಕಿಯಾಗಿರುವ 15 ವಲಸೆ ಕಾರ್ಮಿಕರನ್ನು ಆಗಸ್ಟ್ ತಿಂಗಳ ಆರಂಭದಲ್ಲಿ ಮೀನಿನ ಸೀಜನ್ ಆರಂಭಗೊಳ್ಳುತ್ತಲೆ, ಗುತ್ತಿಗೆದಾರರ ಮೂಲಕ ಮರು ನೇಮಕ ಮಾಡಿಸಿಕೊಳ್ಳುವುದಾಗಿ ಭರವಸೆ ನೀಡಿದರು. ಮಾತುಕತೆಯಲ್ಲಿ ನೀಡಿದ ಭರವಸೆಯಂತೆ ಇಂದು 15 ಕಾರ್ಮಿಕರನ್ನು ಕಂಪೆನಿಗೆ ಕರೆಯಿಸಿ ತಲಾ 16 ಸಾವಿರದಂತೆ ಎರಡು ತಿಂಗಳ ಬಾಕಿ ವೇತನವನ್ನು ಕಂಪೆಮಿಯ ಆಡಳಿತ ಪಾವತಿ ಮಾಡಿದೆ.
Facebook Comments
You may like
-
ಸಿಎಎ ಪ್ರತಿಭಟನೆ ಸಂದರ್ಭ ನಡೆದ ಗೋಲಿಬಾರ್ ಗೆ ಪ್ರತೀಕಾರವಾಗಿ ಪೊಲೀಸ್ ಮೇಲೆ ಹಲ್ಲೆ – ಮಾಯಾ ಗ್ಯಾಂಗ್ ನ ಸದಸ್ಯರ ಆರೆಸ್ಟ್
-
ಪುಟ್ ಪಾತ್ ಮೇಲೆ ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಟ್ರಕ್ – 15 ಮಂದಿ ಸಾವು
-
ಅನುಮತಿ ಇಲ್ಲದೆ ಡ್ರೋನ್ ಬಳಸಿದರೆ ಕಠಿಣ ಕ್ರಮ – ಪೊಲೀಸ್ ಆಯುಕ್ತರ ಎಚ್ಚರಿಕೆ
-
ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಕೊಳೆತ ಭ್ರೂಣದ ಅವಶೇಷ ಪತ್ತೆ..!!
-
ಖಾಸಗಿ ಬಸ್ ನಲ್ಲಿ ಲೈಂಗಿಕ ಕಿರುಕುಳ..ಆರೋಪಿ ಪತ್ತೆಗೆ ವಿಶೇಷ ತಂಡ
-
ಮಂಗಳೂರು ಬಸ್ ನಲ್ಲಿ ಲೈಂಗಿಕ ಕಿರುಕುಳ: ಯುವತಿ ಮಾಡಿದ ಪೋಸ್ಟ್ ವೈರಲ್
You must be logged in to post a comment Login