LATEST NEWS
ಇನ್ನೂ ನಶೆಯಲ್ಲಿದ್ದಾಳೆ ಸ್ಪಾ ಬೆಡಗಿ ಆಸ್ಕಾ…ನಶೆ ಇಳಿದ ಮೇಲಷ್ಟೇ ವಿಚಾರಣೆ…!!
ಮಂಗಳೂರು ಸೆಪ್ಟೆಂಬರ್ 22: ಡ್ರಗ್ ಪೆಡ್ಲರ್ ಕಿಶೋರ್ ಅಮನ್ ಶೆಟ್ಟಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೋಲೀಸರು ಇದೀಗ ಆತನ ಸ್ನೇಹಿತೆಯನ್ನೂ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಮಣಿಪುರ ಮೂಲಕ ಅಸ್ಕಾ ಬಂಧಿತ ಯುವತಿಯಾಗಿದ್ದು, ಈಕೆ ಮಂಗಳೂರಿನ ಸ್ಪಾ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬಗ್ಗೆ ಪೋಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಯುವತಿಯನ್ನು ಪೋಲೀಸರು ನಿನ್ನೆ ಬಂಧಿಸಿದ್ದು, ಬಂಧನದ ವೇಳೆ ಯುವತಿ ವಿಪರೀತ ನಶೆಯಲ್ಲಿದ್ದಳು. ಈ ಹಿನ್ನಲೆಯಲ್ಲಿ ಆಕೆಯನ್ನು ಡ್ರಗ್ ಟೆಸ್ಟ್ ಗೆ ಒಳಪಡಿಸಲಾಗಿದೆ. ಟೆಸ್ಟ್ ವರದಿಯಲ್ಲಿ ಯುವತಿಯಲ್ಲಿ ಪಾಸಿಟೀವ್ ಅಂಶ ಪತ್ತೆಯಾಗಿದ್ದು, ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಮಂಗಳೂರು ಪೋಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್ ಮಾಹಿತಿ ನೀಡಿದ್ದಾರೆ.
ಆಸ್ಕಾ ಡ್ರಗ್ಸ್ ನಶೆಯಲ್ಲಿ ತೇಲುತ್ತಿರುವುದರಿಂದ ಆಕೆಯನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯವಾಗುತ್ತಿಲ್ಲ. ಆಸ್ಕಾ ಪೊಲೀಸ್ ಕಸ್ಟಡಿಯಲ್ಲೇ ನಶೆಯಲ್ಲಿ ತೇಲಾಡುತ್ತಿದ್ದಾಳೆ. ಕಳೆದೊಂದು ದಿನದಿಂದ ಡ್ರಗ್ಸ್ ಗುಂಗಿನಿಂದ ಆಚೆ ಬಂದಿಲ್ಲ. ನಶೆಯಲ್ಲಿ ತೇಲಾಡುತ್ತಿರುವ ಆಸ್ಕಾಳನ್ನ ನೋಡಿ ಖಾಕಿ ಶಾಕ್ ಆಗಿದೆ.
ಕಿಶೋರ್ ಶೆಟ್ಟಿ ಇದೀಗ ಪೋಲೀಸ್ ಕಸ್ಟಡಿಯಲ್ಲಿದ್ದು, ಆತನ ಎಲ್ಲಾ ಲಿಂಕ್ ಗಳ ಬಗ್ಗೆಯೂ ಪೋಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಒಟ್ಟು ಮೂರು ತಂಡ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು. ಮಾದಕ ವಸ್ತು ಸಾಗಾಟ ಸಂದರ್ಭದಲ್ಲಿ ಬಾಲಿವುಡ್ ನಟ ಹಾಗೂ ಡ್ಯಾನ್ಸರ್ ಕಿಶೋರ್ ಶೆಟ್ಟಿ ಹಾಗೂ ಆತನ ಸಹಚರ ಅಕೀಲ್ ನೌಶೀದ್ ನನ್ನು ಪೋಲೀಸರು ಬಂಧಿಸಿದ್ದರು.
ಬಂಧಿತರಿಂದ ಮಾದಕವಸ್ತುಗಳನ್ನೂ ಪೋಲೀಸರು ವಶಪಡಿಸಿಕೊಂಡಿದ್ದರು. ಈ ಸಂಬಂಧ ಮಂಗಳೂರು ಪೋಲೀಸರು ಆರೋಪಿಗಳನ್ನು ಏಳು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
Facebook Comments
You may like
-
ಸಂದರ್ಶನದಲ್ಲಿ ಮಹಿಳಾ ಅಧಿಕಾರಿಗೆ ಖಾಸಗಿ ಅಂಗ ಪ್ರದರ್ಶಿಸಿದ ಐಟಿ ಉದ್ಯೋಗಾಕಾಂಕ್ಷಿ..!
-
ಜನವರಿ 30ರ ನಂತರ ಕಂಬಳ ಪ್ರಾರಂಭ – ಸಂಸದ ನಳಿನ್ ಕುಮಾರ್ ಕಟೀಲ್
-
ಕುಂದಾಪುರದಲ್ಲಿ ಬೈಕ್ ಕಳ್ಳರಿಗೆ ಸಾರ್ವಜನಿಕರಿಂದ ಬಿತ್ತು ಗೂಸಾ…!
-
ಸೆಕ್ಯುರಿಟಿಗಾರ್ಡ್ 6ನೇ ಮಹಡಿಯಿಂದ ಬಿದ್ದು ಮೃತ್ಯು
-
ಬಂಗಾರ್ ಪಲ್ಕೆಯ ಜಲಪಾತದ ಗುಡ್ಡ ಕುಸಿದು ಓರ್ವ ಮೃತ್ಯು
-
ಕಡಬ ಹೆದ್ದಾರಿಯಲ್ಲಿ ಭೀಕರ ಅಪಘಾತ; ಒಂದು ಬಲಿ..
You must be logged in to post a comment Login