ಪುತ್ತೂರು ಸೆಪ್ಟೆಂಬರ್ 05: ಹಟ್ಟಿಯೊಳಗಿನ ಹಸುವನ್ನು ಕದ್ದು ಅದರ ಮಾಂಸ ಮಾಡಿ ಸಾಗಾಟ ಮಾಡಿದವರ ಕೈಯನ್ನೇ ಕಡಿಯಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಕಡಂಬು ಎಂಬಲ್ಲಿ ದುಷ್ಕರ್ಮಿಗಳಿಂದ ಹಸು ಕಳೆದುಕೊಂಡ ಕುಟುಂಬದ ಭೇಟಿ ಮಾಡಿ ಬಳಿಕ ಮಾತನಾಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಇಂತಹ ಹೀನ ಕೃತ್ಯ ಮಾಡಿದವರ ಕೈಯನ್ನೇ ಕಡಿಯಬೇಕು, ಮುಂದೆ ಯಾರೂ ಇಂಥ ಕೃತ್ಯ ಎಸಗಬಾರದು, ಆರೋಪಿಗಳ ಪತ್ತೆಗೆ ಪೋಲೀಸರಿಗೆ ಸೂಚಿಸಿದ್ದೇನೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ ಎಂದರು.

ಸಮಾಜದಲ್ಲಿ ಸಾಮರಸ್ಯವನ್ನು ಕದಡುವ ಪ್ರಯತ್ನವನ್ನು ದುಷ್ಕರ್ಮಿಗಳು ಮಾಡುತ್ತಿದ್ದಾರೆ. ಪೋಲೀಸರು ಆರೋಪಿಗಳಿಗೆ ಅವರ ಶೈಲಿಯಲ್ಲೇ ವಿಚಾರಿಸಬೇಕು ಎಂದರು. ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಕೆಲಸವಾಗುತ್ತಿದೆ ಎಂದರು.



