Connect with us

LATEST NEWS

ಕೊರೊನಾ ವಾರಿಯರ್ಸ್ ಗೆ ಕಲಾಕೃತಿ ಮೂಲಕ ಕೃತಜ್ಞತೆ ಸಲ್ಲಿಸಿದ ಕಲಾವಿದ ಶ್ರೀನಾಥ ಮಣಿಪಾಲ

ಉಡುಪಿ ಅಗಸ್ಟ್ 14: ಸ್ವಾತಂತ್ರ್ಯ ದಿನಾಚರಣೆಗೆ ಕೊರೋನಾದ ಕರಿಛಾಯೆ ಬಿದ್ದಿದೆ. ಇಷ್ಟಾದರೂ ಜನರ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ. ಸರಳ ಆಚರಣೆಗೆ ಅವಕಾಶ ಇದೆ. ಹಾಗಾಗಿ ಹಲವರು ತಮ್ನದೇ ರೀತಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಗೆ ಮುಂದಾಗಿದ್ದಾರೆ.

ಪ್ರಸಿದ್ದ ಚಿತ್ರ ಕಲಾವಿದ ಶ್ರೀನಾಥ್ ಮಣಿಪಾಲ ಒಂದು ವಿಶಿಷ್ಟ ಕಲಾಕೃತಿ ರಚಿಸಿದ್ದಾರೆ. 320 ಚದರಡಿ ಉದ್ದದ ಈ ಕಲಾಕೃತಿಯಲ್ಲಿ ಕೊರೋನಾ ವಾರಿಯರ್ಸ್‌ ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ವೈದ್ಯರು, ಪೊಲೀಸರು, ನರ್ಸ್ ಗಳು ಸೇರಿದಂತೆ ಮುಂಚೂಣಿಯಲ್ಲಿ ದುಡಿಯುತ್ತಿರುವ ವಾರಿಯರ್ಸ್ ಗೆ ಈ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ನೆಪದಲ್ಲಿ ರಚಿಸಲಾದ ಈ ಕಲಾಕೃತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Facebook Comments

comments