Connect with us

LATEST NEWS

ಮಲಯಾಳಂನ ಖ್ಯಾತ ನಟ ವಿಜಯ್‍ ಬಾಬುಗೆ ಬಂಧನ ವಾರೆಂಟ್

ತಿರುವನಂತಪುರ, ಮೇ 09: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಮಲಯಾಳಂನ ಖ್ಯಾತ ನಟ ವಿಜಯ್ ಬಾಬುಗೆ ಕೇರಳದ ಪೊಲೀಸರು ಬಂಧನದ ವಾರೆಂಟ್ ಹೊರಡಿಸಿದ್ದಾರೆ.

ಚಿತ್ರಗಳಲ್ಲಿ ಅವಕಾಶ ನೀಡುವುದಾಗಿ ಆಕೆಯ ಮೇಲೆ ಲೈಂಗಿಕ ಕ್ರಿಯೆ ನಡೆಸಿ ವಂಚಿಸಿದ್ದಾರೆಂದು ಮಹಿಳೆಯು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಹಿಳೆ ದೂರು ನೀಡಿದ್ದಾಗಿನಿಂದಲೂ ನಟ ವಿಜಯ್ ತಲೆ ಮರೆಸಿಕೊಂಡಿದ್ದು ಆತನನ್ನು ಬಂಧಿಸುವಂತೆ ಎನಾರ್ಕುಲಂನ ಕೋರ್ಟ್ ರೆಕಾರ್ಡ್ ಕಾರ್ನರ್ ನೋಟಿಸ್ ಅನ್ನು ಹೊರಡಿಸಿತ್ತು.

ಕೋರ್ಟ್ ನೋಟಿಸ್ ನೀಡಿದ ನಂತರ ಪೊಲೀಸರು ನಟ ಮತ್ತು ನಿರ್ಮಾಪಕ ವಿಜಯ್‍ಬಾಬುವಿನ ಫೋಟೋ ಹಾಗೂ ವಿವರಗಳನ್ನು ಅಂತರಾಷ್ಟ್ರೀಯ ಅಪರಾಧ ಪೊಲೀಸ್ ಸಂಸ್ಥೆಯ (ಇಂಟರ್‍ಪೆಪೊಲ್) ವೆಬ್‍ಸೈಟ್‍ನಲ್ಲೂ ಹಾಕಿದ್ದರು. ಈಗ ಕೇರಳ ಪೊಲೀಸರು ಕೂಡ ಆತನ ವಿರುದ್ಧ ಬಂಧನದ ವಾರೆಂಟ್ ಅನ್ನು ಹೊರಡಿಸಿದ್ದಾರೆ.

ಏಪ್ರಿಲ್ 22 ರಂದು ಮಹಿಳೆಯೊಬ್ಬಳು ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ ನಟ ವಿಜಯ್‍ಬಾಬು ಅವರು ನನಗೆ ಮಲಯಾಳಂ ಚಿತ್ರರಂಗದಲ್ಲಿ ಅವಕಾಶ ಕೊಡಿಸುವುದಾಗಿ ವಂಚಿಸಿ ಅವರ ಅಪಾರ್ಟ್‍ಮೆಂಟ್‍ನಲ್ಲಿ ಮಾರ್ಚ್ 13 ರಿಂದ ಏಪ್ರಿಲ್ 14ರವರೆಗೂ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು ನೀಡಿದ್ದರು. ಇದಕ್ಕೆ ಸಂಬಂಸಿದಂತೆ ಏಪ್ರಿಲ್ 26 ರಂದು ವಿಜಯ್ ಅವರು ಫೇಸ್‍ಬುಕ್ ಲೈವ್‍ಗೆ ಬಂದು, ನಾನು ಯಾವುದೇ ತಪ್ಪು ಮಾಡಿಲ್ಲ, ನನ್ನ ವಿರುದ್ಧ ಆ ಮಹಿಳೆಯ ಸುಳ್ಳು ಆರೋಪ ಮಾಡಿದ್ದಾಳೆ, ಇದರಿಂದ ನಾನು ತುಂಬಾ ನೊಂದಿದ್ದೇನೆ ಎಂದು ಹೇಳಿದ್ದರು.

ಮಹಿಳೆಯು ಕಳೆದ ಡಿಸೆಂಬರ್ 2021 ರಿಂದ ಮಾರ್ಚ್ 2022ರವರೆಗೂ ನನ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಹಲವು ಬಾರಿ ಮೊಬೈಲ್ ಸಂದೇಶ ಕಳುಹಿಸಿದ್ದು, ಸುಮಾರು 400 ಸ್ಕ್ರೀನ್‍ಶಾಟ್‍ಗಳು ಇವೆ, ಆಕೆ ನೀಡಿರುವ ದೂರು ನನ್ನ ವಿರುದ್ಧ ಷಡ್ಯಂತ್ರವಷ್ಟೇ ಎಂದು ಹೇಳಿದ್ದಾನೆ. ಈ ಪ್ರಕರಣದ ಸತ್ಯಾಸತ್ಯತೆಗಳು ವಿಜಯ್‍ಬಾಬು ಬಂಧನದ ನಂತರವೇ ತಿಳಿದು ಬರಲಿದೆ.

Advertisement
Click to comment

You must be logged in to post a comment Login

Leave a Reply