MANGALORE
ಅಪಾರ್ಟ್ ಮೆಂಟ್ ಸೆಕ್ರೆಟರಿಯಿಂದಲೇ ಪ್ಲ್ಯಾಟ್ ನಲ್ಲಿ ಕಳ್ಳತನ
ಮಂಗಳೂರು ಸೆಪ್ಟೆಂಬರ್ 22: ತಿಂಗಳ ಹಿಂದೆ ಫ್ಲಾಟ್ ಒಂದರಲ್ಲಿ ನಡೆದ ಕಳ್ಳತನ ಪ್ರಕರಣ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನವೀನ್, ರಘು, ಅಮೇಶ್, ಸಂತೋಷ್ ಎಂದು ಗುರುತಿಸಲಾಗಿದ್ದು, ಬಂಧಿತರಿಂದ 224 ಗ್ರಾಂ ಚಿನ್ನ, 30.80 ಲಕ್ಷ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ.
ಮಂಗಳೂರು ಸುರತ್ಕಲ್ ಹೊರವಲಯದ ಇಡ್ಯಾ ಎಂಬಲ್ಲಿಯ ಜಾರ್ಡಿನ್ ಅಪಾರ್ಟ್ ಮೆಂಟ್ ಒಂದರ ಪ್ಲ್ಯಾಟ್ ಒಂದರಲ್ಲಿ ಈ ಕಳ್ಳತನ ನಡೆದಿದ್ದು, ಅಪಾರ್ಟ್ ಮೆಂಟ್ ನಲ್ಲಿದ್ದ ಸೆಕ್ರೆಟರಿ ಮಾಜಿ ಸೈನಿಕ ನವೀನ್ ಎಂಬಾತ ಈ ಕಳ್ಳತನದ ಮಾಸ್ಟರ್ ಮೈಂಡ್ ಆಗಿದ್ದಾನೆ. ಕಳ್ಳತನ ಮಾಡಲು ಕೇರಳದಿಂದ ನುರಿತ ಕಳ್ಳರನ್ನು ಅಪಾರ್ಟ್ ಮೆಂಟ್ ಸೆಕ್ರೆಟರಿ ನವೀನ್ ಗೊತ್ತು ಮಾಡಿದ್ದು, ಬಾರ್ ಸಪ್ಲೈಯರ್ ಸಂತೋಷ್ ಎಂಬಾತನೊಂದಿಗೆ ಸೇರಿ ಅಪಾರ್ಟ್ ಮೆಂಟ್ ನಲ್ಲಿದ್ದ ವಿದ್ಯಾಪ್ರಭು ಎಂಬವರಿಗೆ ಸೇರಿದ ಪ್ಲ್ಯಾಟ್ ನಲ್ಲಿ ಕಳ್ಳತನ ನಡೆಸಿದ್ದರು.
ಕಳ್ಳನ ನಡೆಸಿದ ಖದೀಮರು ಹಣವನ್ನು ದಂಧುವೆಚ್ಚ ಮಾಡಿದ್ದು, ಆರೋಪಿಗಳಿಂದ 224 ಗ್ರಾಂ ಚಿನ್ನ, 30.80 ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಸಿದ ಕಾರು ಮತ್ತು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
Facebook Comments
You may like
ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನ ಎಗರಿಸಿದ ಕಳ್ಳ..ಅಟ್ಟಿಸಿಕೊಂಡು ಹೋಗಿ ಹಿಡಿದ ಜ್ಯುವೆಲ್ಲರಿ ಶಾಪ್ ಮಾಲಕ
ರ್ಯಾಗಿಂಗ್ ಪ್ರಶ್ನಿಸಿದ ಪ್ರಿನ್ಸಿಪಾಲ್ ಗೆ ಹಲ್ಲೆ ನಡೆಸಿದ ವಿಧ್ಯಾರ್ಥಿಗಳು…!!
ಸತ್ತು 8 ತಿಂಗಳುಗಳ ಬಳಿಕ ಮನೆಯೊಂದರಲ್ಲಿ ಅಸ್ಥಿಪಂಜರ ಪತ್ತೆ
ಉಡುಪಿ: ಚಾಲಕಿಯ ನಿಯಂತ್ರಣ ತಪ್ಪಿದ ಕಂದಕಕ್ಕೆ ಬಿದ್ದ ಕಾರು
17 ವರ್ಷದ ಮಗಳ ಅಕ್ರಮ ಸಂಬಂಧ …ಮಗಳ ರುಂಡ ಕತ್ತರಿಸಿ ಪೊಲೀಸ್ ಠಾಣೆಗೆ ಬಂದ ಅಪ್ಪ..!!
ವಾಟ್ಸಪ್ ನಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ ಸ್ಟೇಟಸ್ ಹಾಕಿದ್ದಕ್ಕೆ ಹಲ್ಲೆಗೆ ಮುಂದಾದ ದುಷ್ಕರ್ಮಿಗಳು
You must be logged in to post a comment Login