ಬಳ್ಳಾರಿ , ಏಪ್ರಿಲ್ 18: ಬಳ್ಳಾರಿ ಹೊರವಲಯದ ಪಿ.ಡಿ ಹಳ್ಳಿಯಲ್ಲಿ ಪ್ಯಾರಚೂಟ್ ತರಬೇತಿ ವೇಳೆ ಆಯತಪ್ಪಿ 50 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದು ಯೋಧರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. 25 ವರ್ಷದ ಯೋಧ ಚಿನ್ನರಾಜ್ ಗಾಯಗೊಂಡಿದ್ದರು. ತಕ್ಷಣವೇ ಪ್ರಾಥಮಿಕ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯದ ತೀವ್ರತೆ ಹೆಚ್ಚಿದ್ದ ಕಾರಣ ವೈದ್ಯರ ಸಲಹೆಯಂತೆ ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಲಾಯಿತು.

ಗಾಯಗೊಂಡ ಯೋಧನನ್ನು 25 ವರ್ಷದ ಚಿನ್ನರಾಜ್ ಎಂದು ಗುರುತಿಸಲಾಗಿದೆ. ಘಟನೆಯ ತೀವ್ರತೆಗೆ ಯೋಧನ ಕಾಲಿನ ಮೂಳೆ ಮುರಿದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿಶೇಷ ಹೆಲಿಕಾಪ್ಟರ್ ಮೂಲಕ ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ಏರ್ಲಿಫ್ಟ್ ಮಾಡಲಾಗಿದೆ.
ಪಿ.ಡಿ. ಹಳ್ಳಿ ಬಳಿಯ ವಿಶಾಲ ಬಯಲಿನಲ್ಲಿ ಶನಿವಾರ ಮುಂಜಾನೆ ಸುಮಾರು 417 ಸೈನಿಕರ ತಂಡವು ಪ್ಯಾರಚೂಟ್ ಜಿಗಿತದ ತಾಲೀಮು ನಡೆಸುತ್ತಿತ್ತು. ಈ ವೇಳೆ ಯೋಧ ಚಿನ್ನರಾಜ್ ಅವರು ವಿಮಾನದಿಂದ ಜಿಗಿದ ನಂತರ ಭೂಸ್ಪರ್ಶ ಮಾಡುವ (Landing) ಹಂತದಲ್ಲಿ ಪ್ಯಾರಚೂಟ್ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದೆ ಅಥವಾ ಆಯತಪ್ಪಿದೆ ಎನ್ನಲಾಗಿದೆ. ಇದರಿಂದಾಗಿ ಅವರು ನೇರವಾಗಿ ಸುಮಾರು 50 ಅಡಿ ಎತ್ತರದಿಂದ ನೆಲಕ್ಕೆ ಅಪ್ಪಳಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸಹೋದ್ಯೋಗಿಗಳು ಮತ್ತು ಸೇನಾ ವೈದ್ಯಕೀಯ ತಂಡವು ಗಾಯಾಳುವನ್ನು ಬಳ್ಳಾರಿಯ ವಿಮ್ಸ್ (VIMS) ಆಸ್ಪತ್ರೆಗೆ ದಾಖಲಿಸಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ವೈದ್ಯರ ಸಲಹೆಯಂತೆ ಸುಧಾರಿತ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರಿಸಲು ನಿರ್ಧರಿಸಲಾಯಿತು.