DAKSHINA KANNADA
ಅಡಿಕೆ ವ್ಯಾಪಾರಿಗೆ ಚೂರಿ ಇರಿದು ನಾಲ್ಕು ಲಕ್ಷ ರೂ. ದರೋಡೆ
ಪುತ್ತೂರು, ಅಕ್ಟೋಬರ್ 27 : ಅಡಿಕೆ ವ್ಯಾಪಾರಿಗೆ ಚೂರಿ ಇರಿದು ನಾಲ್ಕು ಲಕ್ಷ ರೂ. ದರೋಡೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿಯ ಪೆರ್ನೆಯಲ್ಲಿ ಸಂಭವಿಸಿದೆ. ಅಡಿಕೆ ವ್ಯಾಪಾರಿ ದೀಪಕ್ ಶೆಟ್ಟಿ ದುಷ್ಕರ್ಮಿಗಳಿಂದ ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೃಷಿಕರಿಂದ ಅಡಿಕೆ ಖರೀದಿಸಿ ವ್ಯಾಪಾರ ಮಾಡುತ್ತಿದ್ದ ದೀಪಕ್ ಅಡಿಕೆ ಮಾರಿ ಬಂದ ನಗದು ನಾಲ್ಕು ಲಕ್ಷ ರೂಪಾಯಿಗಳನ್ನು.ಬೈಕಿನಲ್ಲಿ ತಗೊಂಡು ಹೋಗುತ್ತಿದ್ದ ದೀಪಕ್ ಶೆಟ್ಟಿಯವರನ್ನು ಇನ್ನೊಂದು ಬೈಕಿನಲ್ಲಿ ಬಂದ ಇಬ್ಬರ ತಂಡ ಅಡ್ಡ ಹಾಕಿ ಚೂರಿಯಿಂದ ಇರಿದು ಹಣದೊಂದಿಗೆ ಪರಾರಿಯಾಗಿದ್ದಾರೆ. ದೀಪಕ್ ಶೆಟ್ಟಿ ಕುತ್ತಿಗೆ ಮತ್ತು ಬೆನ್ನಿಗೆ ತೀವ್ರ ಗಾಯಗಳಾಗಿದ್ದು ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.