LATEST NEWS
ಪ್ಲಾಸ್ಟಿಕ್ ಬದಲು ಪರಿಸರ ಸ್ನೇಹಿ ಅಡಕೆ ಹಾಳೆ ಡಬ್ಬದಲ್ಲಿ ಸಿಹಿ ತಿಂಡಿ
ಪ್ಲಾಸ್ಟಿಕ್ ಬದಲು ಪರಿಸರ ಸ್ನೇಹಿ ಅಡಕೆ ಹಾಳೆ ಡಬ್ಬದಲ್ಲಿ ಸಿಹಿ ತಿಂಡಿ
ಮಂಗಳೂರು ಡಿಸೆಂಬರ್ 13: ಮದುವೆ ಸಮಾರಂಭಗಳಲ್ಲಿ ಊಟದ ಬಳಿಕ ಪ್ಲಾಸ್ಟಿಕ್ ಬಾಕ್ಸ್ ಗಳಲ್ಲಿ ಅತಿಥಿಗಳಿಗೆ ಸಿಹಿ ತಿಂಡಿ ವಿತರಿಸುವುದು ಸಾಮಾನ್ಯ. ಆದರೆ ನಗರದ ಸಂಘನಿಕೇತನದಲ್ಲಿ ಗುರುವಾರ ಹಸೆಮಣೆ ಏರಿದ ವಿನಾಯಕ್ ಮತ್ತು ನೇಹಾ ಅತಿಥಿಗಳಿಗೆ ಅಡಕೆ ಹಾಳೆಯಲ್ಲಿ ಮಾಡಲಾದ ಆಕರ್ಷಕ ಬಾಕ್ಸ್ ನಲ್ಲಿ ಸಿಹಿ ತಿಂಡಿ ವಿತರಿಸುವ ಮೂಲಕ ಪರಿಸರ ಸ್ನೇಹಿ ವ್ಯವಸ್ಥೆ ತಮ್ಮ ಕೊಡುಗೆ ನೀಡಿದ್ದಾರೆ.
ಅವರ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದ್ದು, ಸ್ವತಃ ಶಾಸಕ ವೇದವ್ಯಾಸ್ ಕಾಮತ್ ಅವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಈ ವಿಚಾರ ಬರೆದು ಶ್ಲಾಘಿಸಿದ್ದಾರೆ. ಡಬ್ಬದ ಮೇಲೆ ಸೇ ನೋ ಟು ಪ್ಲಾಸ್ಟಿಕ್ , ಸೇವ್ ಪ್ಲಾನೆಟ್ ಅರ್ತ್ ಎನ್ನುವ ಬರಹವಿತ್ತು.