DAKSHINA KANNADA
ಅಕಾಡಮಿಗಳಿಗೆ ಅಧ್ಯಕ್ಷರ ನೇಮಕ : ತುಳು – ತಾರನಾಥ್ ಗಟ್ಟಿ ಕಾಪಿಕಾಡ್, ಬ್ಯಾರಿ- ಉಮರ್ ಯು.ಎಚ್, ಕೊಂಕಣಿ- ಜೋಕಿಂ ಸ್ಟ್ಯಾನಿ ಅಲ್ವಾರಿಸ್
ಮಂಗಳೂರು :ತುಳು, ಬ್ಯಾರಿ, ಕೊಂಕಣಿ ಅಕಾಡೆಮಿಗಳಿಗೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ತಾರನಾಥ್ ಗಟ್ಟಿ ಕಾಪಿಕಾಡ್, ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಶಿಕ್ಷಣ ತಜ್ಞ ಉಮರ್ ಯು.ಎಚ್. ಹಾಗೂ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸಮಾಜ ಸೇವಕ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಅವರನ್ನು ನೇಮಿಸಿದೆ.
ತುಳು ಅಕಾಡೆಮಿಯ ಸದಸ್ಯರಾಗಿ ಪೃಥ್ವಿರಾಜ್, ಕುಂಬ್ರ ದುರ್ಗಪ್ರಸಾದ್ ರೈ, ಮೋಹನ್ ದಾಸ್ ಕೊಟ್ಟಾರಿ, ಅಕ್ಷಯ್ ಆರ್. ಶೆಟ್ಟಿ, ಶೈಲೇಶ್ ಬಿನ್ ಭೋಜ ಸುವರ್ಣ, ಕಿಶೋರ್ ಬಿನ್ ಗುಡ್ಡಪ್ಪ ಗೌಡ, ಬೂಬ ಪೂಜಾರಿ, ರೋಹಿತಾಶ್ವ ಯು. ಕಾಪಿಕಾಡ್, ನಾಗೇಶ್ ಕುಮಾರ್ ಉದ್ಯಾವರ, ಸಂತೋಷ್ ಶೆಟ್ಟಿ ನೇಮಕಗೊಂಡಿದ್ದಾರೆ.
ಬ್ಯಾರಿ ಅಕಾಡೆಮಿಯ ಸದಸ್ಯರಾಗಿ ಬಿ.ಎಸ್.ಮುಹಮ್ಮದ್ ಚಿಕ್ಕಮಗಳೂರು, ಹಫ್ಸಾ ಬಾನು 0ಬೆಂಗಳೂರು, ಸಾರಾ ಅಲಿ ಪರ್ಲಡ್ಕ, ಶಮೀರಾ ಜಹಾನ್, ಯು.ಎಚ್. ಖಾಲಿದ್ ಉಜಿರೆ, ತಾಜುದ್ದೀನ್, ಅಬೂಬಕರ್ ಅನಿಲಕಟ್ಟೆ, ಅಬ್ದುಲ್ ಶರೀಫ್, ಹಮೀದ್ ಹಸನ್ ಮಾಡೂರು, ಸಮೀರ್ ಮುಲ್ಕಿ ಅವರನ್ನು ನೇಮಕ ಮಾಡಲಾಗಿದೆ.
ಕೊಂಕಣಿ ಅಕಾಡೆಮಿಯ ಸದಸ್ಯರಾಗಿ ವಂ.ಪ್ರಕಾಶ್ ಮಾಡ್ತಾ, ರೊನಾಲ್ಡ್ ಕ್ರಾಸ್ತಾ, ಡಾ. ವಿಜಯಲಕ್ಷ್ಮಿ ನಾಯಕ್, ನವೀನ್ ಲೋಬೋ, ಸಪ್ನಾಮೇ ಕ್ರಾಸ್ತಾ, ಸಮರ್ಥ್ ಭಟ್, ಸುನಿಲ್ ಸಿದ್ದಿ, ಜೇಮ್ಸ್ ಲೋಪಿಸ್, ದಯಾನಂದ ಮುಡೈಕರ್, ಪ್ರಮೋದ್ ಪಿಂಟೋ ನೇಮಕಗೊಂಡಿದ್ದಾರೆ.
ತಾರಾನಾಥ್ ಗಟ್ಟಿ ಕಾಪಿಕಾಡ್ (ಪತ್ರಕರ್ತರು )
ಕಳೆದ 29 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸೇವೆ
2017 – 18 ರ ಅವಧಿಯಲ್ಲಿ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಸೇವೆ
ತುಳು ಪರಿಷತ್ ಸಂಘಟನೆಯ ಅಧ್ಯಕ್ಷರಾಗಿ ಸೇವೆ
ತುಳು ಪರಿಷತ್ ಮೂಲಕ 2919 ರಲ್ಲಿ ಪ್ರಥಮ ವಿದ್ಯಾರ್ಥಿ ತುಳು ಸಮ್ಮೇಳನ ಆಯೋಜನೆ
2016 ರಲ್ಲಿ ತುಳು ಅಕಾಡೆಮಿಗಾಗಿ ತುಳು ಲಿಪಿ ಸಂಶೋಧಕ ವೆಂಕಟರಾಜ ಪುಣಿಂಚತ್ತಾಯರ ಬಗ್ಗೆ ಸಾಕ್ಷ್ಯ ಚಿತ್ರ ನಿರ್ಮಾಣ
ತುಳು ಅಕಾಡೆಮಿಗೆ ಇದೇ ಮೊದಲ ಬಾರಿಗೆ ಪತ್ರಕರ್ತರೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಿರುವುದು .
” ತುಳು ತುಡರ್” ಹೆಸರಿನಲ್ಲಿ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ 50 ಕ್ಕೂ ಹೆಚ್ಚು ಸಂದರ್ಶನ ಆಧಾರಿತ ವಿಡಿಯೋ ಡಾಕ್ಯೂಮೆಂಟರಿ ನಿರ್ಮಾಣ
ಮಂಗಳೂರು ವಿ.ವಿ.ಯಲ್ಲಿ ಪದವಿಯಲ್ಲಿ ತುಳು ಸಬ್ಜೆಕ್ಟ್ ಹಾಗೂ ತುಳು ಎಂ.ಎ. ಆರಂಭಗೊಳ್ಳುವಲ್ಲಿ 2018 ರಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಎ.ಸಿ.ಭಂಡಾರಿ ಅವರ ಜೊತೆಗೂಡಿ ಸರಕಾರ ಹಾಗೂ ವಿಶ್ವವಿದ್ಯಾಲಯದ ಜೊತೆಗೆ ಸಂವಹನ ನಡೆಸುವಲ್ಲಿ ಮುಖ್ಯ ಪಾತ್ರ
2017 ಹಾಗೂ 2018 ರಲ್ಲಿ ತುಳು ಅಕಾಡೆಮಿ ಆಯೋಜಿಸಿದ ಹಳೆಯ ಕಾಲದ ತುಳು ನಾಟಕಗಳ ನಾಟಕೋತ್ಸವದಲ್ಲಿ ಸಂಚಾಲಕನಾಗಿ ಕಾರ್ಯ
ಪತ್ರಕರ್ತನಾಗಿ ಜನವಾಹಿನಿ ದಿನಪತ್ರಿಕೆ , ಸಂಜೆ ವಾಣಿ, ಟಿವಿ ನೈನ್ , ಜನಶ್ರೀ ವಾಹಿನಿ , ವಿ ಫೋರ್ ವಾಹಿನಿಯಲ್ಲಿ ಕಾರ್ಯನಿರ್ವಹಣೆ
ಜೋಕಿಂ ಸ್ಟ್ಯಾನಿ ಅಲ್ವಾರಿಸ್
* ಬಹುಮುಖಿ ಪ್ರತಿಭೆಗಳ ಆಗರ, ರಂಗಭೂಮಿ ನಟ, ಬಹುಭಾಷಾ ಸಿನೆಮಾ ಕಲಾವಿದ, ಕಾರ್ಯಕ್ರಮ ನಿರೂಪಕ, ಸಂಘಟಕ, ರಾಜಕೀಯ ಮುಖಂಡ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕರ್ತ
* ಬೊಂದೇಲಿನ ಖ್ಯಾತ ಆಲ್ವಾರಿಸ್ ಕುಟುಂಬದಲ್ಲಿ ದಿ. ವಲೇರಿಯನ್ ಆಲ್ವಾರಿಸ್ ಮತ್ತು ಐರಿನ್ ಆಲ್ವಾರಿಸ್ ಇವರ ಸುಪುತ್ರನಾಗಿ ೧968 ನವೆಂಬರ್ 19 ರಂದು ಜನನ.
* ಶಿಕ್ಷಣದ ಬಳಿಕ ವಿವಿಧ ಸಂಸ್ಥೆಗಳಲ್ಲಿ ದುಡಿದು, ಅನುಭವ ಪಡೆದು ಕಳೆದ 12 ವರ್ಷಗಳಿಂದ ಸ್ವ ಉದ್ಯಮ ನಡೆಸುತ್ತಿದ್ದಾರೆ.
ರಾಜಕೀಯ ಜೀವನದ ಆರಂಭದಿಂದಲೂ ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷ ಹುದ್ದೆ ನಿರ್ವಹಣೆ.
ಪ್ರಸ್ತುತ ದ.ಕ.ಜಿಲ್ಲಾ ಕಾಂಗ್ರೆಸಿನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆ
* ಮಾಂಡ್ ಸೊಭಾಣ್ ಸಂಸ್ಥೆಯಲ್ಲಿ – ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಇದರಲ್ಲಿ 1991 ರಲ್ಲಿ ಸಾಮಾನ್ಯ ಸದಸ್ಯನಾಗಿ ಸೇರ್ಪಡೆಗೊಂಡು ತನ್ನ ಕಠಿಣ ಪರಿಶ್ರಮದಿಂದ ಸಂಸ್ಥೆಯನ್ನು ಮೇಲ್ಮಟ್ಟಕ್ಕೆ ಒಯ್ಯುತ್ತಾ, ಕಾರ್ಯದರ್ಶಿ, ಉಪಾಧ್ಯಕ್ಷ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಸಂಘಟಕರಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಮಾಂಡ್ ಸೊಭಾಣ್ ಹಮ್ಮಿಕೊಂಡ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಅಭಿಯಾನಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.
* ಮಾಂಡ್ ಸೊಭಾಣ್ ಮಾಡಿದ ಗಿನ್ನೆಸ್ ದಾಖಲೆಯಲ್ಲಿ ಸಂಘಟನೆಯ ಕೆಲಸ, ಮತ್ತು ಭಾರತದ ರಾಷ್ಟಪತಿಯವರನ್ನು (ಶ್ರೀಮತಿ ಪ್ರತಿಭಾ ಪಾಟೀಲ್) ಮಂಗಳೂರಿಗೆ ಕರೆಸಿದ ಕಾರ್ಯಕ್ರಮದ ಸಂಘಟನೆ ಹಾಗೂ ಕೊಂಕಣಿಯ ಬಹು ದೊಡ್ಡ ಕಾರ್ಯಕ್ರಮಗಳಾದ ಪುನವ್, ಪರಬ್, ಸಾಂತ್ ಇತ್ಯಾದಿ ಕಾರ್ಯಕ್ರಮಗಳ ಸಂಘಟನೆ ಮತ್ತು ಉಸ್ತುವಾರಿ ಸ್ಟಾö್ಯನಿಯವರಾಗಿತ್ತು.
ಮಾಂಡ್ ಸೊಭಾಣ್ ಸೊಸಾಯ್ಟಿ ಕಾಯಿದೆ ಪ್ರಕಾರ ನೋಂದಣಿಯಾದ ಸಂಸ್ಥೆಯಾಗಿದ್ದು, ಈ ಸಂಸ್ಥೆಯ ಎರಡು ಅವಧಿಗೆ ಅಧ್ಯಕ್ಷ, ಎರಡು ಅವಧಿಗೆ ಉಪಾಧ್ಯಕ್ಷ ಮತ್ತು ಇತರೆ ಕೆಲ ಅವಧಿಗಳಿಗೆ ಕಾರ್ಯದರ್ಶಿ ಮತ್ತು ಸಂಘಟಕರಾಗಿ ಸಂಸ್ಥೆಯನ್ನು ಮುನ್ನಡೆಸಿದ್ದಾರೆ.
ರಂಗಭೂಮಿ ನಟನಾಗಿ :
ಕೊಂಕಣಿ ನಾಟಕ ಕ್ಷೇತ್ರ ಹವ್ಯಾಸಿಯಾಗಿದ್ದ ಕಾಲದಿಂದಲೂ ಸ್ಟಾö್ಯನಿಯವರು ಈ ಕ್ಷೇತ್ರಕ್ಕೆ ತನ್ನ ಕೊಡುಗೆ ನೀಡಿದ್ದಾರೆ. ಕೊಂಕಣಿಯ ದೂರದೃಷ್ಟಿಯ ಸಾಹಿತಿ ಚಾಫ್ರಾ ಇವರ ಭಾಂಗಾರ್ ಮನಿಸ್, ಆಂಕ್ವಾರ್ ಮೇಸ್ತಿç, ಮಾಗರ‍್ಚೆಂ ಮಾಗಿರ್, ವಿಶೆಂತಿಚೆ ಭಾವ್ ಇತ್ಯಾದಿ ನಾಟಕಗಳಲ್ಲಿ ನಟಿಸಿದ್ದಾರೆ. ಇದಲ್ಲದೇ ಇತರೆ ಲೇಖಕರ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಕೊಂಕಣಿ ಟಿವಿ ಆರಂಭವಾದ ಕಾಲದಲ್ಲಿ ದಾಕ್ತೆರ್ ದಾಮ್ಯಾಂವ್ ಎಂಬ ಧಾರವಾಹಿಯಲ್ಲೂ ನಟಿಸಿ ಸೈ ಎನಿಸಿದ್ದಾರೆ.
ಸಿನೆಮಾ ಕ್ಷೇತ್ರದಲ್ಲಿ :
ಮಂಗಳೂರಿನಲ್ಲಿ ಕೊಂಕಣಿ ಮತ್ತು ತುಳು ಸಿನೆಮಾ ಕ್ಷೇತ್ರ ಪ್ರವರ್ಧಮಾನಕ್ಕೆ ಬರುತ್ತಿದೆ. ರಿಕ್ಷಾ ಡ್ರೈವರ್, ಅಪ್ಪೆ ಟೀಚರ್, ಪಮ್ಮಣ್ಣೆ ದಿ ಗ್ರೇಟ್, ನಶಿಬಾಚೊ ಖೆಳ್, ಸೊಫಿಯಾ, ಅಶೆಂ ಜಾಲೆಂ ಕಶೆಂ? ಪ್ಲಾನಿಂಗ್ ದೆವಾಚೆಂ, ಜಾಂವಯ್ ನಂ 1, ಬೆಂಡ್ಕಾರ್, ವೊಡ್ತಾಂತ್ಲೆ ಫುಲ್, ಅಸ್ಮಿತಾಯ್, ಅನುಕ್ತಾ, ಬಣ್ಣ ಬಣ್ಣದ ಬದುಕು ಹೀಗೆ ಕೊಂಕ್ಣಿ, ಕನ್ನಡ, ತುಳು ಸಿನೆಮಾಗಳಲ್ಲಿ ನಟಿಸಿ ತ್ರಿ-ಭಾಷಾ ಕಲಾವಿದರಾಗಿ ಪ್ರಸಿದ್ಧಿ ಪಡೆದಿದ್ದಾರೆ.
ನಿರೂಪಕನಾಗಿ :
ಕೊಂಕಣಿಯ ಭಾಷೆ, ಸಂಸ್ಕೃತಿಯ ಅರಿವಿದ್ದು, ಸುಂದರ, ಸರಳವಾಗಿ ಕಾರ್ಯಕ್ರಮ ನಿರೂಪಣೆ ಮಾಡುವ ಕೆಲವೇ ನಿರೂಪಕರಲ್ಲಿ ಓರ್ವರು. ದೇಶ ವಿದೇಶಗಳಲ್ಲಿ 500 ಕ್ಕೂ ಮಿಕ್ಕಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರ್ವಹಿಸಿದ ಖ್ಯಾತಿ ಅವರದ್ದು. ಕನ್ನಡದಲ್ಲೂ ಅವರು ಯಾಡಿಸಿದ್ದಾರೆ.
ಸಮಾಜ ಸೇವಕನಾಗಿ :
ಬಡವ ಮತ್ತು ಬಲ್ಲಿದ ಎಂಬ ಬೇಧವಿಲ್ಲದೆ ತನ್ನ ಬಳಿ ಬರುವ ಸಮಾಜದ ಎಲ್ಲಾ ವ್ಯಕ್ತಿಗಳಿಗೆ ತನ್ನ ಕೈಲಾದ ಸಹಾಯ ಮಾಡುವುದರಲ್ಲಿ ಸಿದ್ದ ಹಸ್ತರು. ಅಪಘಾತ, ಆಸ್ಪತ್ರೆ, ರಕ್ತದಾನ, ಪೋಲೀಸ್ ಸ್ಟೇಶನ್… ಹೀಗೆ ದಿನದ ಯಾವ ಸಮಯದಲ್ಲಿ ಕರೆ ಮಾಡಿದರೂ ಸಹಾಯ ಮಾಡಲು ಇವರು ತಯಾರಿರುತ್ತಾರೆ. ಸರಕಾರಿ ಕಛೇರಿಗಳು ಮತ್ತು ರಾಜಕೀಯ ಮುಖಂಡರ ಮುಖಾಂತರ ಜನರ ಅಗತ್ಯಗಳಿಗೆ ಸ್ಪಂದಿಸುತ್ತಾರೆ. ತುರ್ತು ಅಗತ್ಯಗಳಿಗೆ ಕರೆ ಮಾಡಿದರೆ, ಮಳೆ ಗಾಳಿ ಬಿಸಿಲು ಲೆಕ್ಕಿಸದೆ ಜನಸೇವೆಗೆ ಇಳಿಯುತ್ತಾರೆ. ಜನರ ಅಗತ್ಯಗಳಿಗೆ ಸ್ಪಂದಿಸುವ ಪ್ರತಿಫಲಾಪೇಕ್ಷೇಯಿಲ್ಲದೆ ಸ್ಪಂದಿಸುವ ಗುಣ ಅವರಲ್ಲಿದೆ.
You must be logged in to post a comment Login