LATEST NEWS
ಡ್ರಗ್ಸ್ ಪ್ರಕರಣ – ನಾಳೆ ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾಗಲಿರುವ ಆಂಕರ್ ಅನುಶ್ರೀ
ಮಂಗಳೂರು ಸೆಪ್ಟೆಂಬರ್ 24: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಆಂಕರ್ ಅನುಶ್ರೀಗೆ ನೋಟಿಸ್ ನೀಡಿದ ಬೆನ್ನಲ್ಲೆ ನಾಳೆಯೇ ಮಂಗಳೂರಿಗೆ ತೆರಳಿ ವಿಚಾರಣೆಯಲ್ಲಿ ಭಾಗಿಯಾಗುವುದಾಗಿ ಅನುಶ್ರೀ ತಿಳಿಸಿದ್ದಾರೆ.
ಮಂಗಳೂರು ಸಿಸಿಬಿ ಪೊಲೀಸರು ಇದೇ 26ಕ್ಕೆ ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡುವಂತೆ ಅನುಶ್ರೀಗೆ ನೋಟಿಸ್ ನಲ್ಲಿ ಸೂಚಿಸಿದ್ದಾರೆ. ಆದರೆ ಅನುಶ್ರೀ ನಾನು ನಾಳೆಯೇ ಹೋಗುತ್ತೇನೆ. ವಿಳಂಬ ಮಾಡುವುದಿಲ್ಲ’ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಯಾರೋ ಮಾಡಿದ ಆರೋಪಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ಪೊಲೀಸರು ನನ್ನ ವಿರುದ್ಧ ಯಾವುದೇ ಆರೋಪಗಳನ್ನು ಮಾಡಿಲ್ಲ. ಅವರು ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ನಾನು, ನನಗೆ ತಿಳಿದಿರುವ ಎಲ್ಲ ಮಾಹಿತಿಯನ್ನು ನೀಡುತ್ತೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಡ್ರಗ್ಸ್ ಜಾಲ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಮಂಗಳೂರಿನ ಸಿಸಿಬಿ ಪೊಲೀಸ್ ಜಾರಿಗೊಳಿಸಿದ ನೋಟಿಸ್ ಅನ್ನು, ಇನ್‌ಸ್ಪೆಕ್ಟರ್ ಪ್ರದೀಪ್ ಗುರುವಾರ ಸಂಜೆ ಬೆಂಗಳೂರಿನಲ್ಲಿ ಅನುಶ್ರೀ ಅವರಿಗೆ ನೀಡಿದ್ದಾರೆ.
ನಟ ಕಿಶೋರ್ ಆಪ್ತ ಸ್ನೇಹಿತ ತರುಣನನ್ನ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಿಶೋರ್ಗೆ ಡ್ರಗ್ಸ್ ಲೋಕವನ್ನು ಪರಿಚಯ ಮಾಡಿಸಿದ್ದೇ ತರುಣ್ ಎಂದು ತಿಳಿದುಬಂದಿದೆ. ಹಾಗಾಗಿ, ತರುಣ್ನನ್ನು ಬಂಧಿಸಿದ ಪೊಲೀಸರು ಆತನ ಡ್ರಗ್ ಟೆಸ್ಟ್ ಮಾಡಿಸಿದ್ದು ಅದರಲ್ಲಿ ಪಾಸಿಟಿವ್ ಬಂದಿದೆ.
ತರುಣ್ ಕೂಡ ಕೋರಿಯೋಗ್ರಫರ್ ಕಂ ಆಂಕರ್. ಇದಲ್ಲದೆ, ಹಲವು ರಿಯಾಲಿಟಿ ಶೋಗಳಲ್ಲಿಯೂ ಸಹ ಭಾಗವಹಿಸಿದ್ದಾನೆ. ಜೊತೆಗೆ, ಖ್ಯಾತ ಆಂಕರ್ ಕಂ ನಟಿ ಅನುಶ್ರೀ ಆಪ್ತ ಸ್ನೇಹಿತ ಎಂದು ಹೇಳಲಾಗಿದೆ. ಹೀಗಾಗಿ, ಮಂಗಳೂರು ಮೂಲದ ಕನ್ನಡದ ಖ್ಯಾತ ರಿಯಾಲಿಟಿ ಶೋ ಆಂಕರ್ ಅನುಶ್ರೀಗೂ ಇದೀಗ ಕಂಟಕ ಶುರುವಾಗಿದೆ ಎಂದು ಹೇಳಲಾಗಿದೆ.
Facebook Comments
You may like
-
ಗಾಂಜಾ ಇನ್ನು ಮುಂದೆ ಅಪಾಯಕಾರಿ ಮಾದಕ ವಸ್ತುವಲ್ಲ – ವಿಶ್ವಸಂಸ್ಥೆಯ ನಿರ್ಣಯಕ್ಕೆ ಭಾರತ ಬೆಂಬಲ
-
ಉಡುಪಿ ಡ್ರಗ್ಸ್ ಜಾಲ – ಮಣಿಪಾಲ ವೈದ್ಯಕೀಯ ವಿಧ್ಯಾರ್ಥಿ ಸಹಿತ ಇಬ್ಬರ ಬಂಧನ
-
ಬಾಲಿವುಡ್ ನಟ ವಿವೇಕ್ ಓಬರಾಯ್ ಮನೆ ಮೇಲೆ ಸಿಸಿಬಿ ದಾಳಿ…!!
-
ಡ್ರಗ್ಸ್ ಸ್ಮಗ್ಲಿಂಗ್ ಪ್ರಕರಣ, ಸಿಪಿಐಎಂ ಮುಖಂಡನ ಮಗ ಇಡಿ ವಿಚಾರಣೆಗೆ ಹಾಜರು …….
-
ಡ್ರಗ್ಸ್ ತನಿಖೆ – ಮಂಗಳೂರು ಸಿಸಿಬಿ ಇನ್‌ಸ್ಪೆಕ್ಟರ್ ದಿಢೀರ್ ವರ್ಗಾವಣೆ
-
ಆ್ಯಂಕರ್ ಅನುಶ್ರೀ ಆರೆಸ್ಟ್ ಆಗದಂತೆ ತಡೆದ ಷುಗರ್ ಡ್ಯಾಡಿ ಯಾರು…? – ಪ್ರಶಾಂತ್ ಸಂಬರಗಿ
You must be logged in to post a comment Login