Connect with us

    LATEST NEWS

    ಡ್ರಗ್ಸ್ ಪ್ರಕರಣದ ಚಾರ್ಜ್‍ಶೀಟ್‍ನಲ್ಲಿ ಆ್ಯಂಕರ್ ಅನುಶ್ರೀ ಹೆಸರು…!!

    ಮಂಗಳೂರು ಸೆಪ್ಟೆಂಬರ್ 08: ಕನ್ನಡ ಕಿರುತೆರೆಯ ಸ್ಟಾರ್ ಆ್ಯಂಕರ್ ಅನುಶ್ರೀಗೆ ಮತ್ತೆ ಸಂಕಟ ಎದುರಾಗಿದ್ದು, ಡ್ರಗ್ಸ್ ಪ್ರಕರಣದ ಚಾರ್ಜ್​ಶೀಟ್​ನಲ್ಲಿ ಅನುಶ್ರೀ ಹೆಸರನ್ನು ಕೂಡ ಸೇರಿಸಲಾಗಿದೆ ಎಂದು ಕನ್ನಡದ ಮಾಧ್ಯಮಗಳು ವರದಿ ಮಾಡಿವೆ. ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆ ವೇಳೆ ಅನುಶ್ರೀ ಮಾದಕ ದ್ರವ್ಯ ಮಾರಾಟ ಮತ್ತು ರೂಂಗೆ ತರುತ್ತಿದ್ದರು ಎಂದು ಅವರ ಸ್ನೇಹಿತ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕಿಶೋರ್ ಅಮನ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.

    ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾರ್ಜ್​ಶೀಟ್​ನಲ್ಲಿ ಎ2 ಕಿಶೋರ್ ಶೆಟ್ಟಿಯನ್ನು ಉಲ್ಲೇಖಿಸಲಾಗಿದೆ. ಅನುಶ್ರೀ ಮಾದಕ ದ್ರವ್ಯ ಸಾಗಾಟದೊಂದಿಗೆ ಸ್ನೇಹಿತರೊಂದಿಗೆ ಡ್ರಗ್ ಪಾರ್ಟಿ ಮತ್ತು ಪಾರ್ಟಿಗೆ ಡ್ರಗ್ಸ್ ತರುತ್ತಿದ್ದರು. ತರುಣ್, ನಾನು ಹಾಗೂ ಅನುಶ್ರೀ ಡ್ರಗ್ ಪಾರ್ಟಿ ಮಾಡುತ್ತಿದ್ದೆವು. ಆಗ ಅನುಶ್ರೀ ನಮ್ಮ ರೂಂಗೆ ಎಕ್ಟಸಿ ಡ್ರಗ್ಸ್ ತರುತ್ತಿದ್ದರು ಎಂದು ಅಮನ್ ಶೆಟ್ಟಿ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾರೆ. ಕಿಶೋರ್, ತರುಣ್ ಜೊತೆ ಸಾಕಷ್ಟು ಬಾರಿ ಅನುಶ್ರೀ ಕೂಡ ಡ್ರಗ್ಸ್​ ಸೇವನೆ ಮಾಡಿದ್ದರು ಎಂದು ಕಿಶೋರ್ ಶೆಟ್ಟಿ ತಿಳಿಸಿದ್ದಾನೆ

    ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಆರೋಪ ಪಟ್ಟಿಯಲ್ಲಿ ಅನುಶ್ರೀ ಹೆಸರು ಉಲ್ಲೇಖ ಮಾಡಿದ್ದಾರೆ. ಆರೋಪಿ ಕಿಶೋರ್ ಹೇಳಿಕೆಯಿಂದ ಪ್ರಕರಣ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

    2007-08ರಲ್ಲಿ ರಿಯಾಲಿಟಿ ಶೋಗೆ ಸಂಬಂಧಿಸಿದಂತೆ ತರುಣ್​ ರೂಮ್​ನಲ್ಲಿ ಅನುಶ್ರೀಗೆ ಡ್ಯಾನ್ಸ್ ತರಬೇತಿ ನೀಡಿದ್ದ. ಈ ಸಂದರ್ಭದಲ್ಲಿ ಅನುಶ್ರೀ ಡ್ರಗ್ಸ್​ ಖರೀದಿಸಿ ತರುತ್ತಿದ್ದರು. ನಮಗೆ ಡ್ರಗ್ಸ್ ನೀಡಿ, ಅನುಶ್ರೀ ಕೂಡ ಊಟದ ಮೊದಲು ಡ್ರಗ್ಸ್ ಸೇವಿಸುತ್ತಿದ್ದರು ಎಂದು ಕಿಶೋರ್ ತಿಳಿಸಿದ್ದಾನೆ. ಆರೋಪಿ ಕಿಶೋರ್ ಹೇಳಿಕೆಯಿಂದ ಪ್ರಕರಣ ಮಹತ್ವ‌ ಪಡೆದಿದೆ. ಇದರ‌ ಆಧಾರದಲ್ಲಿ ಮಂಗಳೂರು ಪೊಲೀಸರು ಆರೋಪ ಪಟ್ಟಿಯಲ್ಲಿ ಅನುಶ್ರೀ ಹೆಸರು ಉಲ್ಲೇಖ ಮಾಡಿದ್ದಾರೆ.

    ಮಾದಕ ವಸ್ತು ಪ್ರಕರಣಕ್ಕೆ‌ ಸಂಬಂಧಿಸಿದಂತೆ ಅನುಶ್ರೀ ಅವರನ್ನು ಮಂಗಳೂರು ಪೊಲೀಸರು‌ ವಿಚಾರಣೆಗೆ ಒಳಪಡಿಸಿದ್ದರು. ಆದರೆ, ಮತ್ತೆ ವಿಚಾರಣೆಗೆ ಕರೆಸಿರಲಿಲ್ಲ. ಪ್ರಕರಣದಲ್ಲಿ‌ ಅನುಶ್ರೀ ಹೆಸರು ಕೈಬಿಡುವಂತೆ ಪ್ರಭಾವಿ ರಾಜಕಾರಣಿಗಳು ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪವೂ‌ ಕೇಳಿ ಬಂದಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply