Connect with us

    LATEST NEWS

    ಮಂಗಳೂರು: ಉಕ್ರೇನ್‌ನಿಂದ ಮರಳಿದ ಅನುಷಾ ಭಟ್

    ಮಂಗಳೂರು, ಮಾರ್ಚ್ 03: ಉಕ್ರೇನ್ ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ನಗರದ ಬಿಜೈ ನಿವಾಸಿ ಅನುಷಾ ಭಟ್, ಗುರುವಾರ ಸುರಕ್ಷಿತವಾಗಿ ನಗರಕ್ಕೆ ಬಂದಿಳಿದಿದ್ದಾರೆ.

    ಉಕ್ರೇನ್ ಸೈನಿಕರು ನಮ್ಮನ್ನು ಗಡಿಯವರೆಗೆ ಬಿಟ್ಟು ಬಂದರು. ನಂತರ ನಾವು ರೊಮೇನಿಯಾಕ್ಕೆ ತೆರಳಿ ಅಲ್ಲಿನ ಆಶ್ರಯ ಕೇಂದ್ರದಲ್ಲಿ ಉಳಿದುಕೊಂಡಿದ್ದೆವು.‌ ರೊಮೇನಿಯಾದಿಂದ ಭಾರತೀಯ ಅಧಿಕಾರಿಗಳು ಮುಂಬೈಗೆ ವಿಮಾನ ವ್ಯವಸ್ಥೆ ಮಾಡಿದ್ದು, ಇದೀಗ ಮುಂಬೈನಿಂದ ಇಲ್ಲಿಗೆ ಬಂದಿದ್ದೇನೆ ಎಂದು ಅನುಷಾ ತಿಳಿಸಿದ್ದಾರೆ.

    ತಂದೆ ಹರೀಶ್ಚಂದ್ರ ಭಟ್ ಹಾಗೂ ತಾಯಿ ವಿದ್ಯಾ ಭಟ್ ಅವರು ವಿಮಾನ ನಿಲ್ದಾಣಕ್ಕೆ ಬಂದು ಮಗಳನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್ ವಿಮಾನ ನಿಲ್ದಾಣದಲ್ಲಿ ಅನುಷಾ ಅವರನ್ನು ಸ್ವಾಗತಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply