LATEST NEWS
‘ನಾನು ನಿನ್ನೆ ಯಮರಾಜನನ್ನು ಭೇಟಿಯಾದೆ…ಮೂರ್ಖ ಭಕ್ತರಿಗಾಗಿ ಭೂಮಿಗೆ ಬಂದೆ’: ಅನುರಾಗ್ ಕಶ್ಯಪ್
ಮುಂಬೈ: ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರು ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಅದೂ ಕಾಂಟ್ರವರ್ಸಿಗಳೇ ಜಾಸ್ತಿ. ಅನುರಾಗ್ ಕಶ್ಯಪ್ ಮೃತಪಟ್ಟಿದ್ದಾರೆ…ಆದರೆ ಸದಾ ನೆನಪಾಗಿ ನಮ್ಮೊಂದಿಗೆ ಉಳಿಯುತ್ತಾರೆ ಎಂಬ ಟ್ವೀಟ್ ನಿನ್ನೆ ಕೆಆರ್ಕೆ ಬಾಕ್ಸ್ಆಫೀಸ್ ಹೆಸರಿನ ಅಕೌಂಟ್ನಲ್ಲಿ ಪೋಸ್ಟ್ ಆಗಿತ್ತು.
ಬಾಲಿವುಡ್ ನ್ಯೂಸ್ ಮತ್ತು ಟ್ರೇಡ್ ಅನಾಲಿಸಿಸ್ಗಾಗಿ ನಟ, ವಿಮರ್ಶಕ, ನಿರ್ಮಾಪಕ, ಲೇಖಕ ಕಮಲ್ ಆರ್ ಖಾನ್ ಅವರು ಕ್ರಿಯೇಟ್ ಮಾಡಿರುವ ಅಕೌಂಟ್ ಇದಾಗಿದೆ. ಹಾಗೇ ಅವರ ವೈಯಕ್ತಿಕ ಖಾತೆಯೂ ಬೇರೆ ಇದೆ.
ಕೆಆರ್ಕೆ ಬಾಕ್ಸ್ ಆಫೀಸ್ ಟ್ವಿಟರ್ ಖಾತೆ ತಮಗೆ ಶ್ರದ್ಧಾಂಜಲಿ ಸಲ್ಲಿಸಿದ್ದನ್ನು ನೋಡಿದ ಅನುರಾಗ್ ಕಶ್ಯಪ್ ತುಂಬ ಫನ್ನಿಯಾಗಿ ಇಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ.
कल यमराज के दर्शन हुए .. आज यमराज खुद घर वापस छोड़ के गए । बोले – अभी तो और फ़िल्में बनानी हैं तुम्हें । तुम फ़िल्म नहीं बनाओगे और बेवक़ूफ़/भक्त उसका boycott नहीं करेंगे , तो उनका जीवन सार्थक नहीं होगा। उनको सार्थकता मिले इसलिए वापस छोड़ गये मुझे। https://t.co/fHuZN6YQ5n
— Anurag Kashyap (@anuragkashyap72) September 14, 2020
ನಿನ್ನೆ ನಾನು ಯಮರಾಜನನ್ನು ಭೇಟಿಯಾದೆ. ಇಂದು ಅವರೇ ನನ್ನನ್ನು ಮನೆಗೆ ವಾಪಸ್ ಕಳಿಸಿದರು. ನಿನಗೆ ಇನ್ನೂ ಅನೇಕ ಸಿನಿಮಾಗಳನ್ನು ಮಾಡುವುದು ಬಾಕಿ ಉಳಿದಿದೆ. ನೀವು ಸಿನಿಮಾ ಮಾಡದೆ ಇದ್ದರೆ, ಮೂರ್ಖರು..ಭಕ್ತರು ಅದನ್ನು ಬಹಿಷ್ಕರಿಸಲು ಆಗದೆ, ಅವರ ಜೀವನವೇ ವ್ಯರ್ಥವಾಗುತ್ತದೆ ಎಂದು ಯಮರಾಜ ನನ್ನ ಬಳಿ ಹೇಳಿ, ಮತ್ತೆ ಭೂಮಿಗೆ ತಂದು ಬಿಟ್ಟಿದ್ದಾರೆ. ನಾನಿನ್ನು ನನ್ನ ಸಿನಿಮಾ ಬಹಿಷ್ಕರಿಸುವವರ ಜೀವನಕ್ಕೆ ಅರ್ಥ ಕೊಡಬೇಕಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಮೊನ್ನೆಯಷ್ಟೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಅನುರಾಗ್ ಕಶ್ಯಪ್, ಅಂದು ಅರ್ನಬ್ ಗೋಸ್ವಾಮಿ ಅವರ ಕಚೇರಿಗೆ ಎರಡು ಚಪ್ಪಲಿಗಳಿಗೆ ಫ್ರೇಮ್ ಕಟ್ಟಿಸಿಕೊಂಡು ತೆಗೆದುಕೊಂಡು ಹೋಗಿ ವಿವಾದ ಸೃಷ್ಟಿಸಿದ್ದರು.
ಇನ್ನು ಅನುರಾಗ್ ಕಶ್ಯಪ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಗ್ಗೆ ಸ್ಪಷ್ಟನೆ ನೀಡಿರುವ ಕೆಆರ್ಕೆ ಬಾಕ್ಸ್ ಆಫೀಸ್, ಅನುರಾಗ್ ಕಪೂರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಹೋಗಿ ಈ ಎಡವಟ್ಟಾಗಿದೆ. ನಮ್ಮ ಸಿಬ್ಬಂದಿಯೋರ್ವರು ಮಾಡಿದ ತಪ್ಪಿಗೆ ಕ್ಷಮೆ ಕೇಳುತ್ತೇವೆ ಎಂದಿದ್ದಾರೆ.
Facebook Comments
You may like
ಕಡಬ ಕೋಟೆಸಾರು ನದಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ
ಆನ್ ಲೈನ್ ಕ್ಲಾಸ್ ವೇಳೆ ಗೆಳೆಯನ ಲೈಂಗಿಕತೆ ಬಗ್ಗೆ ಗಾಸಿಫ್ ಮಾತನಾಡಿ ವೈರಲ್ ಆದ ಶ್ವೇತಾ…..!!
ನೇಣಿಗೆ ಶರಣಾದ ಬುರ್ಖಾ ಅಂಗಡಿ ಮಾಲಕ
ಯಕ್ಷರಂಗದ ಸಿಡಿಲಮರಿ ಡಾ. ಶ್ರೀಧರ್ ಭಂಡಾರಿ ಇನ್ನಿಲ್ಲ
22 ದಿನಗಳ ನಂತರ ಸನತ್ ಶೆಟ್ಟಿ ಮೃತದೇಹ ಪತ್ತೆ
ಮಧ್ಯಪ್ರದೇಶ – ಸೇತುವೆಯಿಂದ ಕಾಲುವೆಗೆ ಬಿದ್ದ ಬಸ್ 32ಕ್ಕೂ ಅಧಿಕ ಮಂದಿ ಸಾವು
You must be logged in to post a comment Login