Connect with us

    LATEST NEWS

    ಕಾಸರಗೋಡು ಜಿಲ್ಲೆ ಪ್ರವೇಶಕ್ಕೆ 5 ಗಡಿಗಳಲ್ಲಿ ಕೊರೊನಾ ಟೆಸ್ಟ್….!!

    ಮಂಗಳೂರು ಅಕ್ಟೋಬರ್ 31: ಕೊರೊನಾದಿಂದ ಲಾಕ್ ಡೌನ್ ನಂತರ ಕೇಂದ್ರ ಸರಕಾರ ಅನ್ಲಾಕ್ ಘೋಷಣೆ ಮಾಡಿ ಅಂತರ್ ರಾಜ್ಯ ಸಂಚಾರಕ್ಕೆ ಯಾವುದೇ ನಿರ್ಬಂಧ ಹೇರಬಾರದೆಂದು ಆದೇಶಿಸಿದ್ದರೂ, ಕೇರಳ ಮಾತ್ರ ಕೇಂದ್ರ ಸರಕಾರದ ಮಾತಿಗೆ ಸೊಪ್ಪು ಹಾಕದೇ ಮತ್ತೆ ತನ್ನದೇ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ.


    ಕೇರಳದಲ್ಲಿ ಕೊರೊನಾ ಸೊಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯ ಹಾದಿಯಲ್ಲಿರುವ ಹಿನ್ನಲೆ ಕಾಸರಗೋಡು ಜಿಲ್ಲಾಡಳಿತ ಕರ್ನಾಟಕದಿಂದ ಕಾಸರಗೋಡು ಜಿಲ್ಲೆಗೆ ಪ್ರವೇಶಿಸುವ 17 ಗಡಿ ರಸ್ತೆಗಳ ಪೈಕಿ 5 ಕಡೆ ಆಂಟಿಜನ್ ಟೆಸ್ಟ್ ವ್ಯವಸ್ಥೆ ಮಾಡಲು ನಿರ್ಧರಿಸಿದೆ. ಹೊರ ರಾಜ್ಯಗಳಿಂದ ಕೋವಿಡ್ ಸರ್ಟಿಫಿಕೇಟ್ ಇಲ್ಲದೆ ಕೇರಳಕ್ಕೆ ಪ್ರವೇಶಿಸುವವರಿಗೆ ಆಂಟಿಜನ್ ಟೆಸ್ಟ್ ಮಾಡಲಾಗುವುದು. ಐದು ಗಡಿ ರಸ್ತೆಗಳಲ್ಲಿ ಇದಕ್ಕಾಗಿ ತಪಾಸಣೆ ಕೇಂದ್ರ ತೆರೆಯಲಾಗುತ್ತಿದೆ. ವೀಡಿಯೋ ಕಾನ್ಪರೆನ್ಸ್ ಮೂಲಕ ನಡೆದ ಕಾಸರಗೋಡು ಜಿಲ್ಲಾಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.


    ತಲಪಾಡಿ ಚೆಕ್‌ಪೋಸ್ಟ್ (ಎನ್.ಎಚ್.66), ಅಡ್ಕಸ್ಥಳ, ಅಡ್ಯನಡ್ಕ ರಸ್ತೆ (ಎಸ್. ಎಚ್.35), ಆದೂರು-ಕೊಟ್ಯಾಡಿ-ಸುಳ್ಯ ರಾಜ್ಯ ಹೆದ್ದಾರಿ(ಎಸ್.ಎಚ್ .55), ಪಾಣತ್ತೂರು-ಚೆಂಬೇರಿ-ಮಡಿಕೇರಿ (ಎಸ್.ಎಚ್.56), ಮಾಣಿಮೂಲೆ-ಸುಳ್ಯ ರಸ್ತೆಗಳಲ್ಲಿ ಚೆಕ್‌ಪೋಸ್ಟ್ ಸಜ್ಜುಗೊಳಿಸಿ, ಆಂಟಿಜೆನ್ ಟೆಸ್ಟ್ ಸೌಲಭ್ಯ ಜಾರಿಗೊಳಿಸಲಾಗುವುದು.


    ಈ ಚೆಕ್‌ಪೋಸ್ಟ್‌ಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಆಂಟಿಜೆನ್ ಟೆಸ್ಟ್ ಸೌಲಭ್ಯ ಇರಲಿದೆ. ಈ ಚೆಕ್‌ಪೋಸ್ಟ್ ಮೂಲಕ ಸಂಜೆ 6 ಗಂಟೆಯ ನಂತರ ಬೆಳಗ್ಗೆ 6 ಗಂಟೆ ವರೆಗೆ ಇತರ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರು ಕೋವಿಡ ನೆಗೆಟಿವ್ ಸರ್ಟಿಫಿಕೆಟ್ ಹಾಜರುಪಡಿಸಬೇಕು. 12 ಪಾಯಿಂಟ್‌ಗಳಲ್ಲಿ ಕೋವಿಡ್ ನೆಗೆಟಿವ್ ಸರ್ಟಿಫಿಕೆಟ್ ಹಾಜರುಪಡಿಸಬೇಕು.


    ತೂಮಿನಾಡ್ ರಸ್ತೆ, ಕೆದಂಪಾಡಿ ಪದವು ರಸ್ತೆ, ಸುಂಕದಕಟ್ಟೆ-ಮುಡಿಪು ರಸ್ತೆ, ಕುರುಡಪದವು ರಸ್ತೆ, ಮುಳಿಗದ್ದಕ್ಕೆ, ಬೆರಿಪದವು, ಸ್ವರ್ಗ-ಆರ್ಲಪದವು ರಸ್ತೆ, ಕ ಟ್ಯಾಡಿ-ಪಳ್ಳತ್ತೂರು-ಕಶ್ವರಮಂಗಲರಸ್ತೆ, ಕೊಟ್ಯಾರಡಿ-ಅಡೂರು-ದೇವರಡ್ಕ ಗಾಳಿಮುಖ-ಈಶ್ವರಮಂಗಲ-ದೇಲಂಪಾಡಿರಸ್ತೆ, ನಾಟಿಕಲ್ಲು-ಸುಳ್ಯ ಪದವು ರಸ್ತೆ, ಚೆನ್ನಕುಂಡ್-ಚಾಮಕೊಚ್ಚಿರಸ್ತೆಗಳು12 ಪಾಯಿಂಟ್‌ಗಳಲ್ಲಿ ಕರ್ನಾಟಕದಿಂದ ಕಾಸರಗೋಡು ಜಿಲ್ಲೆಗೆ ಪ್ರವೇಶಿಸುವ ಯಾತ್ರಿಕರು ಕೊವಿಡ್ ನೆಗೆಟಿವ್ ಸರ್ಟಿಫಿಕೆಟ್ ಹಾಜರುಪಡಿಸಬೇಕಾಗುತ್ತದೆ.
    ಒಂದೇ ದಿನ ಆಗಮಿಸಿ ಮರಳುವ, ದಿನನಿತ್ಯ ಪ್ರಯಾಣ ನಡೆಸುವವರು ನೆಗೆಟಿವ್ ಸರ್ಟಿಫಿಕೆಟ್ ಹಾಜರುಪಡಿಸುವುದು ಯಾ ಗಡಿಪ್ರದೇಶದ ಆಂಟಿಜೆನ್ ಟೆಸ್‌ಗೆ ಒಳಗಾಗುವುದು ಅಗತ್ಯವಿಲ್ಲ. ಅದೇ ರೀತಿ ಚಿಕಿತ್ಸೆ ಯಾ ತುರ್ತು ಅಗತ್ಯಗಳಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಿ ಅದೇ ದಿನ ಮರಳುವ ಮಂದಿಗೆ ನೆಗೆಟಿವ್ ಸರ್ಟಿಫಿಕೆಟ್ ಹಾಜರುಪಡಿಸುವುದು ಯಾ ಗಡಿಪ್ರದೇಶದ ಆಂಟಿಜೆನ್ ಟೆಸ್ಟಗೆ ಒಳಗಾಗುವುದು ಅಗತ್ಯವಿಲ್ಲ.

    Share Information
    Advertisement
    Click to comment

    You must be logged in to post a comment Login

    Leave a Reply