Connect with us

BANTWAL

ಬಂಟ್ವಾಳದಲ್ಲಿ ಮತ್ತೆ ಕೊಲೆ, ರೌಡಿಶೀಟರ್ ಹತ್ಯೆ..!?

ಬಂಟ್ವಾಳ: ಬಂಟ್ವಾಳದಲ್ಲಿ ಮತ್ತೆ ಕೊಲೆ, ರೌಡಿಶೀಟರ್ ಹತ್ಯೆ.ಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ತಲವಾರು ಝಳಪಿಸಿದೆ. ಬಂಟ್ವಾಳದ ಮೆಲ್ಕಾರ್ ಎಂಬಲ್ಲಿ ರೌಡಿಶೀಟರ್ ಒಬ್ಬನನ್ನು ದುಷ್ಕರ್ಮಿಗಳು ತಲವಾರಿ‌ನಲ್ಲಿ ಕಡಿದು ಹತ್ಯೆ ಮಾಡಿದ್ದಾರೆ. ಹತ್ಯೆಯಾದ ಯುವಕನ್ನು ಕಲ್ಲಡ್ಕ ನಿವಾಸಿ ಚೆನ್ನೆ ಫಾರೂಕ್ ಎಂದು ಗುರುತಿಸಲಾಗಿದೆ.

ಈತ ಮೆಲ್ಕಾರು ಸಮೀಪ ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭ ಕಾರಿನಲ್ಲಿ ಬೆನ್ನಟ್ಟಿದ್ದ ಇಬ್ಬರ ತಂಡ ಹಿಗ್ಗಾಮುಗ್ಗ ಕಡಿದು ಪರಾರಿಯಾಗಿದೆ.

ಚೆನ್ನೆ ಫಾರೂಕ್ ವಿರುದ್ಧ ಬಂಟ್ವಾಳ ಸೇರಿದಂತೆ ಹಲವು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಕೊಲೆ ನಡೆಸಿದ ಆರೋಪಿಗಳೂ ಕೂಡಾ ಸ್ಥಳೀಯವಾಗಿ ಗುರುತಿಸಿಕೊಂಡಿರುವ ಇನ್ನೊಂದು ಗ್ಯಾಂಗ್ ನವರೆಂದು ತಿಳಿದುಬಂದಿದೆ.