ಹುಬ್ಬಳ್ಳಿ ಎಪ್ರಿಲ್ 05: ಪ್ರೀತಿಸುವ ನೆಪದಲ್ಲಿ ಹಿಂದೂ ಯುವತಿಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಿ, ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಮುಫೀಜ್ ಮಿಯಾನ್ನವರ್ ಎಂಬಾತನನ್ನು ಕೇಶ್ವಾಪುರ ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ನಗರದಲ್ಲಿ ನಡೆದ ಸಮೀರ್ ಪ್ರಕರಣದ ಬೆನ್ನಲ್ಲೇ ಈ ಘಟನೆ ಬೆಳಕಿಗೆ ಬಂದಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಕಮರಿಪೇಟೆಯ ಗವಿ ಓಣಿ ನಿವಾಸಿ ಮುಫೀಜ್, ಕಾಲೇಜು ಕಾರ್ಯಕ್ರಮವೊಂದರಲ್ಲಿ ಯುವತಿಯ ಪರಿಚಯ ಮಾಡಿಕೊಂಡಿದ್ದ. ಆರಂಭದಲ್ಲಿ ಸ್ನೇಹ ಬೆಳೆಸಿ ನಂತರ ಯುವತಿಯನ್ನು ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ. ಕಳೆದ ಆಗಸ್ಟ್ನಲ್ಲಿ ಧಾರವಾಡದಲ್ಲಿ ರಿಜಿಸ್ಟರ್ ಮದುವೆಯಾಗಲು ಸಿದ್ಧತೆ ನಡೆಸಿದ್ದಾಗ ಯುವತಿ ಕುಟುಂಬದವರು ತಡೆದಿದ್ದರು. ಇದಾದ ಬಳಿಕ ಯುವತಿಯ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿ, ಮನೆಯಲ್ಲಿ ಯಾರಿಲ್ಲದ ವೇಳೆ ನುಗ್ಗಿ ದೌರ್ಜನ್ಯ ಮುಂದುವರಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಮೀರ್ ಮುಲ್ಲಾನ ಲವ್ ಜಿಹಾದ್ ಪ್ರಕರಣ ಹೊರ ಬಂದ ಬಳಿಕ ದೈರ್ಯದಿಂದ ಹೊರಬಂದ ಯುವತಿ, ಸಂಘಟನೆಯವರ ನೆರವಿನಿಂದ ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಇದೀಗ ಮುಫೀಸ್ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗಿದೆ. ಜೀವಭಯದಿಂದ ಸುಮ್ಮನಿದ್ದ ಯುವತಿ, ಇತ್ತೀಚಿನ ಬೆಳವಣಿಗೆಗಳಿಂದ ಧೈರ್ಯ ತಂದುಕೊಂಡು ಸಂಘಟನೆಗಳ ನೆರವಿನೊಂದಿಗೆ ದೂರು ದಾಖಲಿಸಿದ್ದಾರೆ. “ಯುವತಿಯ ದೂರಿನನ್ವಯ ಮುಫೀಜ್ ಮಿಯಾನ್ನವರ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದೆ” ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಮೊದಲು ಸ್ನೇಹಿತರಾಗಿದ್ದೆವು, ನಂತರ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಅಂತ ದೂರು ನೀಡಿದ್ದಾರೆ. ಮುಫೀಜ್ ಮಿಯಾನ್ನವರ ವಿರುದ್ಧ ದೂರು ದಾಖಲಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಯುವತಿ ಆರೋಪದ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದಿದ್ದಾರೆ.