Connect with us

UDUPI

ಸರಣಿ ಮೀನುಗಾರಿಕಾ ದೋಣಿ ದುರಂತಕ್ಕೆ ಬೆಚ್ಚಿ ಬಿದ್ದ ಉಡುಪಿ

ಉಡುಪಿ: ಉಡುಪಿಯಲ್ಲಿ ಇತ್ತೀಚೆಗೆ ಮೀನುಗಾರ ಸಮುದಾಯಕ್ಕೆ ಸರಣೆ ಮೀನುಗಾರಿಕಾ ದೋಣಿಗಳ ದುರಂತ ಆಘಾತವನ್ನು ಉಂಟು ಮಾಡಿದೆ. ಈ ನಡುವೆ ಇಂದು ಕೂಡ ಮತ್ತೊಂದು ದೋಣಿ ದುರಂತ ಸಂಭವಿಸಿದೆ. ಮರವಂತೆಯಲ್ಲಿ ಮೀನುಗಾರಿಕೆ ನಿರತವಾಗಿದ್ದ ಸಂದರ್ಭ ದೊಡ್ಡ ತೆರೆಯ ರಭಸಕ್ಕೆ ದೋಣಿ ಮಗುಚಿರುವ ಘಟನೆ ನಡೆದಿದ್ದು, ದೋಣಿ ಮಾಲೀಕರಿಗೆ ಗಂಭೀರ ಗಾಯಗಳಾಗಿದೆ.


ಗಂಗೊಳ್ಳಿ ಬಂದರಿನ ಶ್ರೀನಿವಾಸ ಕಾರ್ವಿ ಎಂಬವರ ಮಾಲೀಕತ್ವದ ಆದಿ ಆಂಜನೇಯ ದೋಣಿ ಇಂದು ತ್ರಾಸಿ ಮರವಂತೆ ಸಮೀಪ ಮೀನುಗಾರಿಕೆಗೆ ತೊಡಗಿದ್ದ ಸಂದರ್ಭ ದೊಡ್ಡ ತೆರೆಯ ರಭಸಕ್ಕೆ ದೋಣಿ ದಿಬ್ಬಕ್ಕೆ ಹೊಡೆದು ಮಗುಚಿದೆ. ಅದೃಷ್ಟವಶಾತ್ ಮೀನುಗಾರರು ಸಮುದ್ರದಲ್ಲಿ ಈಜಿ ತಮ್ಮ ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾರೆ. ಆದರೆ ದೋಣಿ ಮಗುಚಿದ ಪರಿಣಾಮ ದೋಣಿ ಮಾಲೀಕ ಶ್ರೀನಿವಾಸ್ ಖಾರ್ವಿ ಕಾಲಿಗೆ ಗಂಭೀರ ಗಾಯವಾಗಿದ್ದು ಕುಂದಾಪುರದ ಖಾಸಗಿ ಅಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಘಟನೆಯಲ್ಲಿ ನಾಡ ದೋಣಿಯ ಎರಡು ಇಂಜಿನ್ ಸಮುದ್ರ ಪಾಲಾಗಿದೆ. ಉಡುಪಿಯಲ್ಲಿ ಪದೇಪದೇ ಇಂತಹ ದುರ್ಘಟನೆಗಳು ನಡೆಯುತ್ತಿರುವುದರಿಂದ ಮತ್ತೆ ಮೀನುಗಾರರಲ್ಲಿ ಆತಂಕ ಮನೆಮಾಡಿದೆ.

Facebook Comments

comments