Connect with us

    LATEST NEWS

    ಮತ್ತೊಂದು ಬಲಿ ಪಡೆದ ಕೊರೊನಾ…ಸುರತ್ಕಲ್ ಜೋಕಟ್ಟೆ ಮಹಿಳೆ ಕೊರೊನಾಗೆ ಬಲಿ

    ಮಂಗಳೂರು ಜೂನ್ 28: ದಕ್ಷಿಣಕನ್ನಡ ಜಿಲ್ಲೆಗೆ  ಇಂದು ಕರಾಳದಿನವಾಗಿ ಮಾರ್ಪಟ್ಟಿದ್ದು, ಕೊರೊನಾಗೆ ಮತ್ತೊಂದು ಬಲಿಯಾಗಿದ್ದು, ಇಂದು ಒಂದೇ ದಿನ ದಕ್ಷಿಣಕನ್ನಡದಲ್ಲಿ ಮೂವರು ಕೊರೊನಾ ಸೊಂಕಿಗೆ ಬಲಿಯಾಗಿದ್ದಾರೆ.

    ಸಾಂದರ್ಭಿಕ ಚಿತ್ರ

    ಸುರತ್ಕಲ್ ನ ಜೋಕಟ್ಟೆ ನಿವಾಸಿ 60 ವರ್ಷದ ಮಹಿಳೆ  ಕೊರಾನಾ ಹಿನ್ನಲೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದರೊಂದಿಗೆ ಕಳೆದ 24 ಗಂಟೆಯಲ್ಲಿ ಕೊರೊನಾ ಮಹಾಮಾರಿಗೆ ಮೂವರು ಮೃತಪಟ್ಟಿದ್ದು, ಇಂದು ಬೆಳಿಗ್ಗೆ ಬಂಟ್ವಾಳದ 67ರ ವೃದ್ಧೆ ಮತ್ತು ಸುರತ್ಕಲ್ 31ರ ಯುವಕ ಸಾವನಪ್ಪಿದ್ದರು.ಇದರೊಂದಿಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

    ಸುರತ್ಕಲ್ ನಲ್ಲಿ ಇಂದು ಒಂದೇ ದಿನ ಇಬ್ಬರು ಕೊರೊನಾ ಸೊಂಕಿಗೆ ಬಲಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply