ಮಂಗಳೂರು ವಿಮಾನ ನಿಲ್ದಾಣದಲ್ಲಿ ಮತ್ತೊಂದು ಅವಘಡ : ಮಾನವಿಯತೆಗೆ ಸಾಕ್ಷಿಯಾದ ಟ್ಯಾಕ್ಸಿ ಚಾಲಕ 

ಮಂಗಳೂರು, ನವೆಂಬರ್ 22 : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೊಂದು ದುರ್ಘಟನೆ ಸಂಭವಿಸಿದೆ.

ನಿಲ್ದಾಣದಲ್ಲಿ ಕಾಮಗಾರಿ ನಡೆಯುತ್ತಿದ್ದ ವೇಳೆ ಕಾರ್ಮಿಕನ ಕಾಲಿಗೆ ಭಾರೀ ಗಾತ್ರದ ಕಬ್ಬಿಣದ ತುಂಡು ಮೇಲಿಂದ ಬಿದ್ದು ಕಾರ್ಮಿಕ ಗಂಭೀರ ಗಾಯಗೊಂಡಿದ್ದಾನೆ.

ಗಾಯಗೊಂಡ ಕಾರ್ಮಿಕನನ್ನು ಉತ್ತರ ಪ್ರದೇಶ ಮೂಲದ ಸಂತೋಷ್ ಎಂದುಗುರುತ್ತಿಸಲಾಗಿದೆ. ಆದರೆ ಗಾಯಗೊಂಡ ಕಾರ್ಮಿಕನನ್ನು ಆಸ್ಪತ್ರೆಗೆ ಕೊಂಡುಹೋಗಲು ವಿಮಾನ ನಿಲ್ದಾಣದಲ್ಲಿ ಅ್ಯಂಬುಲೆನ್ಸ್ ಲಭ್ಯವಿರದ ಕಾರಣ ಸ್ಥಳೀಯ ಟ್ಯಾಕ್ಸಿ ಚಾಲಕ ಮಾನವಿಯತೆ ಮೆರೆದು ಆಸ್ಪತ್ರೆಗೆ ಕೊಂಡೊಯ್ದು ಮಾನವೀಯತೆ ಮೆರೆದಿದ್ದಾನೆ.

ಪ್ರೀಪೇಯ್ಡ್ ಟ್ಯಾಕ್ಸಿ ಚಾಲಕ ಸಿನಾನ್ ಗಾಯಾಳು ಸಂತೋಷ್ ನನ್ನು ಸಕಾಲದಲ್ಲಿ ಆಸ್ಪತ್ರೆಗೆ ಕೊಂಡೊಯ್ದು ಕಾರ್ಮಿಕನ ಅಗತ್ಯ ಚಿಕಿತ್ಸೆಗೆ ಮುಂದಾಗಿರುವುದಲ್ಲದೆ, ಅವನ ಪ್ರಾಣವನ್ನೂ ಉಳಿಸಿದ್ದಾನೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಹಣೆ ಪಟ್ಟಿ ಕಟ್ಟಿಕೊಂಡಿರುವ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಈ ತಿಂಗಳಲ್ಲಿ ನಡೆದ 2 ನೇ ಕಾರ್ಮಿಕ ದುರಂತವಾಗಿದೆ,

ಕೆಲವೇ ದಿನಗಳ ಹಿಂದೆ ಇದೇ ಮಾದರಿ ಅವಘಡ ಸಮಭವಿಸಿದ್ದು ಆಗಲೂ ಅಲ್ಲಿ ಟ್ಯಾಕ್ಸಿ ಚಾಲಕರೇ ಮುಂದಾಗಿ ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲು ಮಾಡಿ ಮಾನವಿಯತೆ ಮೆರೆದಿದ್ದರು.

ಈ ಹಿಂದೆ ಕೂಡ ಇಂತಹುದೇ ದುರಂತಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ್ದರೂ ನಿಲ್ದಾಣ ಪ್ರಾಧಿಕಾರ ಅನಾಹುತ, ಅಪಘಾತಗಳಿಗೆ ಸ್ಪಂದಿಸಲು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ವಹಿಸುತ್ತಿದೆ,

ಈ ಬಾರಿಯೂ ಇದು ಪುನರಾವರ್ತನೆ ಆಗಿದ್ದರತೂ ವಿಮಾನ ನಿಲ್ದಾಣ ಪ್ರಾಧಿಕಾರ ಇನ್ನೂ ಎಚ್ಚೆತ್ತುಕೊಳ್ಳದಿವುದು ಅವರ ಅಸಡ್ಡೆಯನ್ನು ಎತ್ತಿ ತೋರಿಸುತ್ತಿದೆ. ಇದು ಸಾರ್ವಜನಿಕರ ಆಕ್ರೋಶಕ್ಜೆ ಕಾರಣವಾಗಿದೆ.

ವಿಡಿಯೋಗಾಗಿ…