LATEST NEWS
ವಿಚಾರಣೆಗೆ ಕರೆದಾಕ್ಷಣ ಅಪರಾಧಿಯಲ್ಲ…ಅನುಶ್ರೀ
ಮಂಗಳೂರು ಸೆಪ್ಟೆಂಬರ್ 25:ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಮಂಗಳೂರು ಪೊಲೀಸರು ಅನುಶ್ರೀಗೆ ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅನುಶ್ರೀ ಇಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರಿಗೆ ತೆರಳಿ ವಿಚಾರಣೆಗೆ ಹಾಜರಾಗುವುದಾಗಿ ಹೇಳಿಕೊಂಡಿದ್ದಾರೆ. ಈ ನಡುವೆ ಮಾಧ್ಯಮಗಳಲ್ಲಿ ತನ್ನನ್ನು ಅಪರಾಧಿ ಎಂದು ಬಿಂಬಿಸುತ್ತಿರುವುದಕ್ಕೆ ಅವರು ಸ್ಪಷ್ಟನೆ ನೀಡಿದ್ದು, ಸಿಸಿಬಿಯವರು ವಿಚಾರಣೆಗೆ ಮಾತ್ರ ಕರೆದಿರುವುದು. ಹಾಗಂದ ಮಾತ್ರಕ್ಕೆ ನಾನು ಅಪರಾಧಿಯಲ್ಲ ಎಂದು ನಟಿ, ನಿರೂಪಕಿ ಅನುಶ್ರೀ ಹೇಳಿದ್ದಾರೆ.
ಮಂಗಳೂರಿನಲ್ಲಿ ಡ್ಯಾನ್ಸರ್ ಕಿಶನ್ ಶೆಟ್ಟಿ ಸಿಸಿಬಿ ಪೊಲೀಸರ ಮುಂದೆ ನಾನು ಅನುಶ್ರೀ ಅವರ ಜೊತೆ ಪಾರ್ಟಿ ಮಾಡಿದ್ದೆ ಎಂಬ ವಿಷಯವನ್ನು ಸಿಸಿಬಿ ಪೊಲೀಸರ ಮುಂದೆ ಬಾಯಿ ಬಿಟ್ಟಿರುವ ಹಿನ್ನೆಲೆಯಲ್ಲಿ ಈಗಾಗಲೇ ಸಿಸಿಬಿ ಯವರು ಆಂಕರ್ ಅನುಶ್ರೀ ಅವರಿಗೆ ನೋಟಿಸ್ ನೀಡಿದ್ದು ವಿಚಾರಣೆಗೆ ಹಾಜರು ಆಗಲು ಸೂಚನೆಯನ್ನು ಕೊಟ್ಟಿದ್ದಾರೆ..
ಆದ್ರೆ ಸೂಚನೆ ಕೊಟ್ಟಿದ್ದನ್ನೇ ಮಾಧ್ಯಮಗಳು ನಾನು ಅಪರಾಧಿ ಎಂದು ತೋರಿಸುವರ ಮಟ್ಟಿಗೆ ಸುದ್ದಿಯನ್ನು ಬಿತ್ತರಿಸುತ್ತಿವೆ,ಇದರಿಂದಾಗಿ ನಮ್ಮ ಕುಟುಂಬ ಕೂಡಾ ನೋವಿನಲ್ಲಿದೇ ದಯಮಾಡಿ , ಸರಿಯಾದ ಸುದ್ದಿಯನ್ನು ಪ್ರಸಾರ ಮಾಡಲಿ ಜೊತೆಗೆ ಸಿಸಿಬಿಯವರು ಕರೆದರು ಅಂತಾ ಅಂದಾಕ್ಷಣ ನಾನು ಅಪರಾಧಿ ಅಲ್ಲ ನನ್ನನ್ನು ವಿಚಾರಣೆಗೆ ಕರೆದಿದ್ದಾರೆ..
ಹೀಗಾಗಿ ನಾನು ಇಂದು ಖುದ್ದು ಮಂಗಳೂರಿನ ಸಿಸಿಬಿ ಪೊಲೀಸರ ವಿಚಾರಣೆಗೆ ಬೆಳಿಗ್ಗೆ 11 ಗಂಟೆಗೆ ಹೊರಟಿದ್ದೇನೆ ಎಂದು ಪತ್ರಿಕಾ ಪ್ರಕಟಣೆಯನ್ನು ಕೊಟ್ಟಿದ್ದಾರೆ..
Facebook Comments
You may like
-
ಜನವರಿ 30ರ ನಂತರ ಕಂಬಳ ಪ್ರಾರಂಭ – ಸಂಸದ ನಳಿನ್ ಕುಮಾರ್ ಕಟೀಲ್
-
ಸೆಕ್ಯುರಿಟಿಗಾರ್ಡ್ 6ನೇ ಮಹಡಿಯಿಂದ ಬಿದ್ದು ಮೃತ್ಯು
-
ಪರಿಸರ ಉಳಿಸುವಂತೆ ಹಸಿರು ದಳದಿಂದ ಆರಂಭವಾಗಿದೆ ಜಾಗೃತಿಯ ಆಗ್ರಹ…..
-
ಕಾಲೇಜು ವಿಧ್ಯಾರ್ಥಿನಿಗೆ ಅಮಲು ಪದಾರ್ಥ ಕುಡಿಸಿ ಅತ್ಯಾಚಾರ – ಆರೋಪಿ ಸೆರೆ
-
ಖಾಸಗಿ ಬಸ್ ಚಾಲಕನ ಕೊಲೆ ಯತ್ನ – ಆರೋಪಿ ಬೈಕ್ ಸವಾರ ಆರೆಸ್ಟ್
-
ಗುದದ್ವಾರದಲ್ಲಿ ಚಿನ್ನ ಇಟ್ಟು ಅಕ್ರಮ ಸಾಗಾಟಕ್ಕೆ ಯತ್ನ….ಆರೋಪಿ ಸೆರೆ
You must be logged in to post a comment Login