Connect with us

    LATEST NEWS

    ಭ್ರಷ್ಟಚಾರದಿಂದ ಕರ್ನಾಟಕ ಸರ್ಕಾರ ಮಲಗಿದೆ – ಅಮಿತ್ ಶಾ

    ಭ್ರಷ್ಟಚಾರದಿಂದ ಕರ್ನಾಟಕ ಸರ್ಕಾರ ಮಲಗಿದೆ – ಅಮಿತ್ ಶಾ

    ಪುತ್ತೂರು ಫೆಬ್ರವರಿ 20: 30 ವರ್ಷಗಳ ನಂತರ ನರೇಂದ್ರ ಮೋದಿ ಅವರನ್ನು ದೇಶದ ಜನತೆ ಪ್ರಧಾನಿ ಆಗಿ ಆಯ್ಕೆ ಮಾಡಿದೆ. ನರೇಂದ್ರ ಮೋದಿ ಅಧಿಕಾರ ಮಾಡಲು ಬಂದಿಲ್ಲ. ದೇಶದ ಅಭಿವೃದ್ದಿಗಾಗಿ ಬಂದಿದ್ದಾರೆ. ಬಿಜೆಪಿ ಪಕ್ಷ ಜನರಿಗೆ ಇಷ್ಟ ಪಡುವಂತಹ ನಿರ್ದಾರ ತೆಗೆದುಕೊಳ್ಳುವುದಿಲ್ಲ. ಎಲ್ಲ ವ್ಯಕ್ತಿ ಹಾಗೂ ಪ್ರಜೆಗಳಿಗೆ ಇಷ್ಟವಾಗುವಂತಹ ವಿಚಾರ ತೆಗೆದುಕೊಳ್ಳುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ.
    ಪುತ್ತೂರಿನ ಸ್ವಾಮಿ ವಿವೇಕನಂದ ಕಾಲೇಜಿನಲ್ಲಿ ನವಭಾರತ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ವಿಷಯ ಕುರಿತ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಭಾಗವಹಿಸಿ ಅವರು ಮಾತನಾಡಿದರು.

    4 ವರ್ಷದ ಹಿಂದೇ ಇಡೀ ದೇಶದಲ್ಲಿ ನಿರಾಶೆಯ ಪರಿಸ್ಥಿತಿ ಇತ್ತು.ಯುವ ಜನತೆ ದೇಶದ ಸುರಕ್ಷತೆಗೆ ಮತ್ತು ಗಡಿ ಸುರಕ್ಷತೆಯ ಬಗ್ಗೆ ಚಿಂತಿತವಾಗಿತ್ತು. ಆ ಸಂದರ್ಭದ ದೇಶದಲ್ಲಿ 12 ಲಕ್ಷ ಕೋಟಿ ಹಗರಣ ದೇಶದಲ್ಲಿ ನಡೆದಿದೆ ಎಂದು ಹೇಳಿದರು, ಆದರೆ 2014 ರ ಲೋಕಸಭೆ ಚುನಾವಣೆ ಸುವರ್ಣ ಅಕ್ಷರದಲ್ಲಿ ಬರೆದು ಇಡುವಂತಹ ಚುನಾವಣೆ ಆಗಿದೆ. ಎಂದು ಅಮಿತ್ ಶಾ ಹೇಳಿದರು.

    ದೇಶದಲ್ಲಿ ಸ್ವಾತಂತ್ಯ ಕಳೆದು 70 ವರ್ಷ ಆದ್ರೂ ಮೂಲಭೂತ ವ್ಯವಸ್ಥೆ ಕಲ್ವಿಸಲು ಸಾಧ್ಯವಾಗಿಲ್ಲ. ಮೋದಿ ದೇಶದಲ್ಲಿ ಮೊದಲ ಬಾರಿಗೆ ಪಾರದರ್ಶಕ ಆಡಳಿತ ನೀಡಲು ಆರಂಭಿಸಿದ್ದಾರೆ. ಎಲ್ಲ ಕುಟುಂಬಗಳನ್ನು ಅಭಿವೃದ್ದಿ ಪಥದಲ್ಲಿ ಕೊಂಡೋಯ್ಯಲು ಶ್ರಮಿಸುತ್ತಿದ್ದಾರೆ. ಮೋದಿ ಪ್ರಧಾನಿ ಆದ ಬಳಿಕ ಎಲ್ಲ ಮನೆಗಳಿಗೆ ಬ್ಯಾಂಕ್ ಅಕೌಂಟ್ ಆಗಿದೆ.

    7 ಕೋಟಿ ಮನೆಗಳಿಗೆ ಶೌಚಲಯ ವ್ಯವಸ್ಥೆ ಆಗಿದೆ. 18 ಸಾವಿರ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಇರಲಿಲ್ಲ. ಈಗ 12 ಸಾವಿರ ಗ್ರಾಮಗಳಲ್ಲಿ ವಿದ್ಯುತ್ ಪೂರೈಸುವ ಕೆಲಸ ಆಗುತ್ತಿದೆ. 3.5 ಕೋಟಿ ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್ ನೀಡುವ ವ್ಯವಸ್ಥೆ ಆಗಿದೆ. ಮುಂದೆ 8 ಕೋಟಿ ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅಮಿತ್ ಶಾ ಹೇಳಿದರು
    ಇತ್ತೀಚೆಗೆ ಚುನಾವಣೆ ನಡೆದ ತ್ರಿಪುರದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದೆ, ಹಾಗೆಯೇ ಕರ್ನಾಟಕದಲ್ಲಿ ಕೂಡ ಕಮಲ ಅರಳ ಬೇಕಿದೆ ಎಂದರು.

    ಭ್ರಷ್ಟಚಾರದಿಂದ ಕರ್ನಾಟಕ ಸರ್ಕಾರ ಮಲಗಿದೆ ಎಂದು ಆರೋಪಿಸಿದ ಅನಿತ್ ಶಾ ಕೇಂದ್ರದ ಯೋಜನೆಗಳಲ್ಲಿ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದರು. ಕರ್ನಾಟಕದ ಯುವ ಜನತೆ ಕರ್ನಾಟಕವನ್ನು ಅಭಿವೃದ್ದಿ ಪಡಿಸುವ ಭ್ರಷ್ಟಚಾರ ಮುಕ್ತ ಪಕ್ಷವನ್ನು ಆರಿಸಬೇಕು. ವೋಟ್ ಬ್ಯಾಂಕ್ ಪಾಲಿಟಿಕ್ಸ್ ಮಾಡದ ಪಕ್ಷವನ್ನು ಬೆಂಬಲಿಸಿ ಎಂದು ಕರೆ ನೀಡಿದರು. ನರೇಂದ್ರ ಮೋದಿ ದೇಶದ ಅಭಿವೃದ್ದಿಗಾಗಿ ಹಲವು ಕಾರ್ಯಕ್ರಮ ನೀಡಿದ್ದಾರೆ. ಅವರನ್ನು ಬೆಂಬಲಿಸಲು ಯುವ ಜನತೆ ಹಣಿ ಆಗಬೇಕಿದೆ.

    ದೇಶದ ಎಲ್ಲಾ ವರ್ಗಗಳನ್ನು ಅಭಿವೃದ್ದಿ ಪಡಿಸುವ ಚಿಂತನೆ ಪ್ರಧಾನಿ ಮೋದಿ ಮಾಡುತ್ತಿದ್ದಾರೆ ಸಂಪ್ರದಾಯ ಮುಕ್ತ ಅಭಿವೃದ್ದಿ ಪರ ಮತ್ತು ಜಾತಿವಾದಿ ಮುಕ್ತ ಭಾರತ ನಿರ್ಮಾಣ ಮೋದಿ ಅವರ ಕನಸು ಎಂದು ಅಮಿತ್ ಶಾ ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply