Connect with us

    LATEST NEWS

    ಅಂಬ್ಯುಲೆನ್ಸ್ ಟ್ರಕ್ ನಡುವೆ ಭೀಕರ ರಸ್ತೆ ಅಪಘಾತ – 7 ಮಂದಿ ಸಾವು

    ಉತ್ತರಪ್ರದೇಶ ಮೇ 31: ಆಂಬ್ಯುಲೆನ್ಸ್ ಗೆ ಟ್ರಕ್ ಒಂದು ಡಿಕ್ಕಿ ಹೊಡೆದ ಪರಿಣಾಮ 7 ಮಂದಿ ಸಾವನಪ್ಪಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.


    ಮೃತಪಟ್ಟವರಲ್ಲಿ 6 ಮಂದಿ ಒಂದೇ ಕುಟುಂಬದವರು ಎಂದು ತಿಳಿದು ಬಂದಿದೆ. ದೆಹಲಿಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಇಂದು ಮುಂಜಾನೆ ತಮ್ಮ ಊರು ಪಿಲ್ಭಿಟ್​ಗೆ ಆಂಬ್ಯುಲೆನ್ಸ್​ನಲ್ಲಿ ಹಿಂದಿರುಗುವಾಗ​ ದೆಹಲಿ-ಲಖನೌ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದೆ.


    ಆಂಬ್ಯುಲೆನ್ಸ್ ಚಾಲಕ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದಿದ್ದು, ಬಳಿಕ ಎದುರು ಬರುತ್ತಿದ್ದ ಟ್ರಕ್​​ಗೆ ಗುದ್ದಿದೆ. ಪರಿಣಾಮ ಚಾಲಕ ಹಾಗೂ ಒಂದೇ ಕುಟುಂಬದ 6 ಮಂದಿ ಸೇರಿದಂತೆ ಏಳು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply