ಪುಲ್ ಟೈಟ್ ಆಂಬ್ಯುಲೆನ್ಸ್ ಡ್ರೈವರ್…!!

ಉಡುಪಿ ಮೇ.23: ಜನ ಕೊರೊನಾ ವೈರಸ್ ಹಾಗೂ ಲಾಕ್ ಡೌನ್ ನಿಂದ ಕಂಗಾಲಾಗಿದ್ದರೆ. ಇಲ್ಲೊಬ್ಬ ಕೊರೊನಾ  ವಾರಿಯರ್ ಎಂದು ಕರೆಯಲ್ಪಡುವ ಆಂಬ್ಯುಲೆವ್ಸ್ ಡ್ರೈವರ್ ಒಬ್ಬರ ಕಥೆ ನೋಡಿ . ಜನರ ಪ್ರಾಣ ಕಾಪಾಡುವ ಆಂಬ್ಯುಲೆವ್ಸ್ ಡ್ರೈವರ್ ಕಂಠಪೂರ್ತಿ ಕುಡಿದು ತೂರಾಟ ನಡೆಸುತ್ತಿರುವ ದೃಶ್ಯ ಇದು.

ಈ ಚಾಲಕ ರೋಗಿ ಹಾಗೂ ಅವರ ಕುಟುಂಬದವರನ್ನು ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ಬಿಟ್ಟು ವಾಪಸ್ ತೆರಳುವಾಗ ಈ ಘಟನೆ ಸಂಭವಿಸಿದೆ. ಆ್ಯಂಬುಲೆನ್ಸ್ ಡ್ರೈವರ್ ಕಂಠಪೂರ್ತಿ ಕುಡಿದು ಉಪ್ಪೂರು ಬಳಿ ಗಾಡಿಯನ್ನು ತೋಟಕ್ಕೆ ಇಳಿಸಿದ್ದಾನೆ. ಸರಿಯಾಗಿ ನಿಲ್ಲಲು ಆಗದೆ ತೂರಾಡುತ್ತಾ ಇರೊ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜನರ ಪ್ರಾಣವನ್ನು ಕಾಪಾಡುವ ನಿಟ್ಟಿನಲ್ಲಿ ರೋಗಿಗಳನ್ನು ಆ್ಯಂಬುಲೆನ್ಸ್ ನಲ್ಲಿ ಕರೆದೊಯ್ಯುತ್ತಾರೆ. ಅದು ಡ್ರೈವರ್ ಮೇಲಿನ ನಂಬಿಕೆಯ ಮೇಲೆ. ಆದರೆ ರೋಗಿಯನ್ನು ಕರೆದೊಯ್ಯುವ ಆ್ಯಂಬುಲೆನ್ಸ್ ಚಾಲಕನೇ ಈ ರೀತಿ ಕುಡಿದು ತೂರಾಡಿದರೆ ರೋಗಿಗಳ ಸ್ಥಿತಿ ಏನು ಎನ್ನುವ ಪ್ರಶ್ನೆ ಮೂಡುತ್ತಿದೆ. ಎಮರ್ಜೆನ್ಸಿ ಪರಿಸ್ಥಿತಿಯಲ್ಲಿ ಈ ರೀತಿ ಅವಘಡವಾಗುವ ಮುನ್ನ ಎಚ್ಚೆತ್ತುಕೊಳ್ಳುವುದು ಮುಖ್ಯ. ಆ್ಯಂಬುಲೆನ್ಸ್ ಗಳಿಗೆ ಇಂತಹ ಚಾಲಕರು ಯಮಸ್ವರೂಪಿಯಾದರೆ ಏನ್ ಮಾಡೋದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯ ಅಂಬ್ಯುಲೆನ್ಸ್ ಡ್ರೈವರ್ ವಿರುದ್ದ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.