DAKSHINA KANNADA
ಅಮೆಜಾನ್, ಫ್ಲಿಪ್ಕಾರ್ಟ್ ಕಂಪನಿ ಏನು ತುರ್ತು ಸೇವೆ ಕಂಪನಿ ನಾ?… ಶಾಸಕ ಖಾದರ್ ಪ್ರಶ್ನೆ
ಮಂಗಳೂರು, ಮೇ 04: ಮೋಬೈಲ್, ಬಟ್ಟೆ, ಇಲೆಕ್ಟ್ರಿಕಲ್, ಫರ್ನೀಚರ್ ಅಂಗಡಿಗಳು ಬಂದ್ ಮಾಡಿದಿರಿ. ಇದು ತುರ್ತು ಸೇವೆ ಅಲ್ಲ ಆಯಿತು. ಆದರೆ ಅಮೆಜಾನ್, ಫ್ಲಿಪ್ಕಾರ್ಟ್ ಕಂಪನಿ ಏನು ತುರ್ತು ಸೇವೆ ಕಂಪನಿ ನಾ? ಇದು ಹೊರೆ ದೇಶದ ಕಂಪನಿಗೆ ಏಕೆ ಸರ್ಕಾರ ಲಾಭ ಗಳಿಸಿ ಕೋಡುತ್ತೆ? ನಮ್ಮ ಬಟ್ಟೆ ಇಲೆಕ್ಟ್ರಿಕಲ್ ಫರ್ನೀಚರ್ ಮೊಬೈಲ್ ಅಂಗಡಿಗಳು ಸಾಲ ತೆಗೆದುಕೊಂಡು ದುಡಿಯುತ್ತಿದ್ದಾರೆ. ಸರ್ಕಾರ ಕೂಡಲೇ ಅಮೆಜಾನ್, ಫ್ಲಿಪ್ಕಾರ್ಟ್ ಬಂದ್ ಮಾಡಬೇಕೆಂದು ಮಂಗಳೂರಿನಲ್ಲಿ ಶಾಸಕ ಯು ಟಿ ಖಾದರ್ ಆಗ್ರಹ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಆರೋಗ್ಯ ಸಚಿವ, ಮಂಗಳೂರು ಕ್ಷೇತ್ರದ ಶಾಸಕ ಯು ಟಿ ಖಾದರ್ ಅವರು ಇಂದು ಮಂಗಳೂರಿನ ಕೊರೊನಾ ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ಹಿರಿಯ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿದರು. ಇದೇ ವೇಳೆ ಅವರು ಕೊರೊನಾ ಲಸಿಕೆ ನೀಡುತ್ತಿರುವ ಆಯುಷ್ ಕೇಂದ್ರಕ್ಕೂ ಭೇಟಿ ನೀಡಿ ವೃದ್ಧರ ಜೊತೆಗೆ ಚರ್ಚಿಸಿ ಅಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಪ್ರಸ್ತುತ ಕೊರೊನಾ ಲಸಿಕೆ ವಿತರಣೆಯಲ್ಲಿ ಆಗುತ್ತಿರುವ ವಿಳಂಬ ಹಾಗೂ ಆಕ್ಸಿಜನ್ ಸಿಲಿಂಡರ್ಗಳು ಲಭ್ಯವಿರುವ ಬಗ್ಗೆ ವೆನ್ಲಾಕ್ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಕೊರೊನಾವನ್ನು ನಿಯಂತ್ರಿಸಲು ಸರಕಾರಕ್ಕೆ ಸಂಪೂರ್ಣ ನೆರವು ನೀಡುವುದಾಗಿ ಹೇಳಿದರು. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟೊ ವಿಕೋಪಕ್ಕೆ ಹೋಗದಂತಿರಲು ಈಗಾಗಲೇ ಎಚ್ಚರಿಕೆ ವಹಿಸಿಕೊಳ್ಳಬೇಕಾಗಿದೆ. ವೆಂಟಿಲೇಟರ್ ವ್ಯವಸ್ಥೆ ಮಾಡಬೇಕು, ವೆಂಟಿಲೇಟರ್ಗಳ, ಆಕ್ಸಿಜನ್ ವ್ಯವಸ್ಥೆ ಎಷ್ಟಿದೆ ಎನ್ನುವ ಬಗ್ಗೆ ಮಾಹಿತಿಯನ್ನು ಜನತೆಗೆ ನೀಡಬೇಕು ಎಂದು ಖಾದರ್ ನುಡಿದರು.
ಇನ್ನು ಚಾಮರಾಜನಗರದಲ್ಲಿ ನಡೆದ ದುರಂತದ ಬಗ್ಗೆ ಮಾತನಾಡಿದ ಅವರು ಇಂತಹ ಸಾವನ್ನು ಯಾರೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಎಲ್ಲೂ ನಡೆಯಬಾರದು. ಕೇರಳ ಸರಕಾರದ ಮಾದರಿ ವ್ಯವಸ್ಥೇಯಲ್ಲಿ ರಾಜ್ಯ ಸರಕಾರ ಎಲ್ಲಾ ಖಾಸಗಿ ಸಂಸ್ಥೆಗಳ ಆಕ್ಸಿಜನರ್ ವ್ಯವಸ್ಥೆಯನ್ನು ತನ್ನ ಸುಪರ್ದಿಗೆ ವಹಿಸಿಕೊಂಡು ರೋಗಿಗಳಿಗೆ ನೀಡುವ ವ್ಯವಸ್ಥೆ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ನಾಯಕರಾದ ಐವನ್ ಡಿ ಸೋಜಾ, ಮಿಥುನ್ ರೈ, ಎ ಸಿ ವಿನಯರಾಜ್ ಮೊದಲಾದವರಿದ್ದರು.
You must be logged in to post a comment Login